ಬೆಂಗಳೂರು: ಕರ್ನಾಟಕದ ಸುಧೀಕ್ಷಾ ವಿ. ಮತ್ತು ಬೋಪಣ್ಣ ಕ್ಲಪ್ಪ ಚೆನ್ನೈನಲ್ಲಿ ಬುಧವಾರ ಆರಂಭಗೊಂಡ ದಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಸುಧೀಕ್ಷಾ ಮಹಿಳೆಯರ 100 ಮೀ. ಓಟದಲ್ಲಿ 11.92 ಸೆಕೆಂಡ್ಗಳಲ್ಲಿ ಓಡಿ ರಜತಕ್ಕೆ ಕೊರಳೊಡ್ಡಿದರು. ಬೋಪಣ್ಣ ಪುರುಷರ 800 ಮೀ. ಓಟದಲ್ಲಿ 1 ನಿಮಿಷ, 50.45 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ 3ನೇ ಸ್ಥಾನ ಪಡೆದರು. ಕೂಟದ ಮೊದಲ ದಿನ ಭಾರತ 3 ಚಿನ್ನ, 3 ಬೆಳ್ಳಿ, 2 ಕಂಚು ಜಯಿಸಿತು.