ಕ್ರೀಡೆ

ಲೆಜೆಂಡ್ಸ್ ಟಿ20 ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದ ದಕ್ಷಿಣ ಆಫ್ರಿಕಾ

ರಾಯ್‌ಪುರ: ಆರಂಭಿಕರಾದ ಆಂಡ್ರೋ ಪಟಿಕ್ (82*, 54 ಎಸೆತ, 9 ಬೌಂಡರಿ, 1 ಸಿಕ್ಸರ್) ಮತ್ತು ಮಾರ್ನ್ ವಾನ್ ವಿಕ್ (69* ರನ್, 62 ಎಸೆತ, 9 ಬೌಂಡರಿ) ಭರ್ಜರಿ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡ ರಸ್ತೆ ಸುರಕ್ಷತಾ ವಿಶ್ವ ಸರಣಿ ಟಿ20 ಟೂರ್ನಿಯಲ್ಲಿ ಸೋಮವಾರ ನಡೆದ ತನ್ನ 6ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೇರಿವೆ. ಭಾರತ ಮತ್ತು ಶ್ರೀಲಂಕಾ ಈಗಾಗಲೆ ಸೆಮಿಫೈನಲ್‌ಗೇರಿರುವ ಮತ್ತೆರಡು ತಂಡಗಳು. ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವೆ ಮಂಗಳವಾರ ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ ಗೆದ್ದ ತಂಡ ಉಪಾಂತ್ಯಕ್ಕೇರುವ ಮತ್ತೊಂದು ತಂಡವಾಗಿರಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ 9 ವಿಕೆಟ್‌ಗೆ 160 ರನ್ ಸೇರಿಸಿತು. ಪ್ರತಿಯಾಗಿ, ಜಾಂಟಿ ರೋಡ್ಸ್ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡ, 19.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 161 ರನ್ ಗಳಿಸಿ ಟೂರ್ನಿಯಲ್ಲಿ 4ನೇ ಜಯ ದಾಖಲಿಸಿತು.

ಬಾಂಗ್ಲಾದೇಶ ಲೆಜೆಂಡ್ಸ್: 9 ವಿಕೆಟ್‌ಗೆ 160 (ನಜಿಮುದ್ದೀನ್ 32, ಅ್ತಾಬ್ ಅಹ್ಮದ್ 39, ಹನನ್ ಸರ್ಕಾರ್ 36, ಎನ್‌ಟಿನಿ 26ಕ್ಕೆ 2, ಶಬಲಾಲ 33ಕ್ಕೆ 2), ದಕ್ಷಿಣ ಆಫ್ರಿಕಾ ಲೆಜೆಂಡ್ಸ್: 19.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 161 (ಪಟಿಕ್ 82*, ವಾನ್ ವಿಕ್ 69*).