ನವದೆಹಲಿ: ರೋಹಿತ್ ಶರ್ಮ ನೇತೃತ್ವದಲ್ಲಿ ಭಾರತ ತಂಡವು 09ನೇ ಆವೃತ್ತಿಯ ಟಿ20 ವಿಶ್ವಕಪ್ ಜಯಿಸಿದ್ದು, ಟೂರ್ನಿ ಮುಗಿದು ಎರಡು ವಾರಗಳಾಗುತ್ತ ಬಂದರೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಈ ಹಿಂದೆ ವಿರಾಟ್ರನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾರನ್ನು ಕ್ಯಾಪ್ಟನ್ ಮಾಡಿದಾಗ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಕ್ರೀಡಾಭಿಮಾನಿಗಳು ಮುಗಿ ಬಿದ್ದಿದ್ದರು. ಕ್ರೀಡಾ ವಲಯದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇನ್ನೂ ಈ ಕುರಿತು ಮಾತನಾಡಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, 2021ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಲೀಗ್ ಹಂತದಲ್ಲೇ ಹೊರಬಿತ್ತು. ಇದಾದ ಬಳಿಕ ನಾಯಕತ್ವದಿಂದ ವಿರಾಟ್ರನ್ನು ಕೆಳಗಿಳಿಸುವಂತೆ ನಮಗೆ ಆಗ್ರಹ ಕೇಳಿ ಬಂತು. ಆ ಬಳಿಕ ನಾನು ವಿರಾಟ್ರನ್ನು ಕೆಳಗಿಳಿಸಿ ರೋಹಿತ್ರನ್ನು ಎಲ್ಲಾ ಮಾದರಿಗೆ ನಾಯಕನನ್ನಾಗಿ ಮಾಡಿದೆ.
ವಿರಾಟ್ರನ್ನು ಒಂದು ಮಾತು ಕೇಳದೆ ಕೆಳಗಿಳಿಸಲಾಗಿದೆ ಎಂದು ಅನೇಕರು ನನ್ನ ಟ್ರೋಲ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದರು. ಆದರೆ, ನಾವು ವಿರಾಟ್ನೊಂದಿಗೆ ಈ ವಿಚಾರವನ್ನು ಚರ್ಚಿಸಿ ಆ ಬಳಿಕ ರೋಹಿತ್ರನ್ನು ನಾಯಕನನ್ನಾಗಿನೇಮಿಸಿದೆವು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದರೆ, ಆತನನ್ನು ಭಾರತ ತಂಡದ ನಾಯಕನನ್ನಾಗಿ ಮಾಡಿದ್ದು ನಾನೇ ಎಂಬುದನ್ನು ಎಲ್ಲರೂ ಮರೆತಿದ್ದಾರೆ.
ನಾನು ರೋಹಿತ್ ಶರ್ಮಾಗೆ ಭಾರತ ತಂಡದ ನಾಯಕತ್ವವನ್ನು ನೀಡಿದಾಗ, ಎಲ್ಲರೂ ನನ್ನನ್ನು ಟೀಕಿಸಿದರು. ಈಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು ಟಿ20 ವಿಶ್ವಕಪ್ ಗೆದ್ದುಕೊಂಡಿದೆ, ಅದಕ್ಕಾಗಿ ಎಲ್ಲರೂ ನನ್ನನ್ನು ನಿಂದಿಸುವುದನ್ನು ನಿಲ್ಲಿಸಿದ್ದಾರೆ. ವಾಸ್ತವವಾಗಿ, ಅವರನ್ನು ಭಾರತ ತಂಡದ ನಾಯಕನನ್ನಾಗಿ ನೇಮಿಸಿದ್ದು ನಾನೇ ಎಂಬುದನ್ನು ಎಲ್ಲರೂ ಮರೆತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಸೌರವ್ ಗಂಗೂಲಿ ಟ್ರೋಲ್ ಂಆಡಿದವರಿಗೆ ತಿರುಗೇಟು ನೀಡಿದ್ದಾರೆ.