ನವದೆಹಲಿ: ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಎಲ್ಗೆ (IPL) ವಿಶ್ವದಾದ್ಯಂತ ಅಭಿಮಾನಿಗಳಿದ್ದು, ಟೂರ್ನಿ ಶುರುಬವಾಗುವುದಕ್ಕೂ ಮುಂಚಿನಿಂದಲೇ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತದೆ. ಈ ಹಿಂದೆ ಮ್ಯಾಚ್ ಫಿಕ್ಸಿಂಗ್ ಹಾಗೂ ಬಹುಕೋಟಿ ಹಗರಣಗಳ ವಿಇಚಾರವಾಗಿ ಹೆಚ್ಚು ಸದ್ದು ಮಾಡಿದ್ದ ಐಪಿಎಲ್ ಈಗ ಮಾಜಿ ಆಯುಕ್ತ ಲಲಿತ್ ಮೋದಿ (Lalit Modi) ಮಾಡಿರುವ ಸರಣಿ ಆರೋಪಗಳಿಂದ ಮತ್ತೊಂದು ಬಾರಿಗೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
2010ರಲ್ಲಿ ಐಪಿಎಲ್ ಹಗರಣ (IPL Scam) ಈ ದೇಶದಲ್ಲಿ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಲಲಿತ್ ಮೋದಿ (Lalit Modi) ಮೇಲೆ ಬಹುಕೋಟಿ ಹಗರಣದ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತ್ತು. ಆ ಬಳಿಕ ಅವರು ದೇಶವನ್ನು ತೊರೆದಿದ್ದರು. ಇದೀಗ 14 ವರ್ಷಗಳ ಬಳಿಕ ಇದೇ ಮೊದಲ ಬಾರಿ ಈ ಬಗ್ಗೆ ಲಲಿತ ಮೋದಿ (Lalit Modi) ಮೌನ ಮುರಿದಿದ್ದಾರೆ. ಸಂಸದ ಶಶಿ ತರೂರ್ (Shashi Tharoor), ಸೋನಿಯಾ ಗಾಂಧಿ (Sonia Gandhi) ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ ಶಮಾನಿಯ Figuring Out ಪಾಡ್ಕಾಸ್ಟ್ನಲ್ಲಿ ಈ ಬಗ್ಗೆ ಮಾತನಾಡಿರುವ ಲಲಿತ್ (Lalit Modi), ನಾನು 2010ರಲ್ಲಿ ಭಾರತ ತೊರೆದಿದ್ದು ಕಾನೂನು ಸಮಸ್ಯೆಗಳಿಂದಲ್ಲ. ಬದಲಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೀವ ಬೆದರಿಕೆ ಹಾಕಿದ ಕಾರಣಕ್ಕೇ ನಾನು ದೇಶ ಬಿಡಬೇಕಾಯಿತು. ದಾವೂದ್ ಇಬ್ರಾಹಿಂನಿಂದ (Dawood Ibrahim) ನಿರಂತರ ಬೆದರಿಕೆ ಕರೆಗಳು ಬಂದಿದ್ದರಿಂದ ನಾನು ದೇಶವನ್ನು ತೊರೆದು ಹೋಗಬೇಕಾಯ್ತು. ನನಗ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿಕೊಳ್ಳುವಂತೆ ನಿರಂತರ ಬೆದರಿಕೆಗಳು ಬಂದಿದ್ದವು. ನನಗೆ ಜೀವ ಬೆದರಿಕೆ ಬಂದಿದ್ದಕ್ಕೇ ನಾನು ದೇಶ ತೊರೆದೆ.
ಇದಲ್ಲದೆ ಕೊಚ್ಚಿ (kochi Franchise) ಫ್ರಾಂಚೈಸಿ ಕುರಿತಾಗಿ ಮಾತನಾಡಿರುವ ಲಲಿತ್, ಕೊಚ್ಚಿ ತಂಡದ ವಿಚಾರವಾಗಿ ಸುನಂದಾ ಶೂನ್ಯ ಬಂಡವಾಳದ ಹೊರತಾಗಿಯೂ ಶೇ.25% ರಷ್ಟು ಲಾಭಾಂಶ ಪಾಲು ಸಂಸದ ಶಶಿ ತರೂರ್ ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ (Sunanda Pushkar) ಮುಂದಾಗಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ನನಗೆ ಶಶಿ ತರೂರ್ (Shashi Tharoor) ಹಾಗೂ ದೆಹಲಿಯ 10 ಜನಪಥ್ ಶಕ್ತಿಕೇಂದ್ರದಿಂದ (ಸೋನಿಯಾ ಗಾಂಧಿ ಅವರ ನಿವಾಸ) ಐಟಿ, ಇಡಿ ದಾಳಿ ನಡೆಸುವುದಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಈ ವಿಚಾರವಾಗಿ ಆಗಿನ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ (Shashank Manohar) ಅವರು ಕರೆ ಮಾಡಿ ಒಪ್ಪಂದಕ್ಕೆ ಸಹಿ ಹಾಕುವಂತೆ ಹೇಳಿದರು. ಒಂದು ವೇಳೆ ಸಹಿ ಹಾಕದಿದ್ದರೆ ನನ್ನ ಸ್ಥಾನದಿಂದ ನನ್ನನು ತೆಗೆದುಹಾಕುವುದಾಗಿ ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಸುನಂದಾ ಪುಷ್ಕರ್ ಸಾವಿನ ಸುದ್ದಿ ಹೊರಬರುತ್ತಿದ್ದಂತೆ ಶಶಿ ತರೂರ್ ಮೊದಲು ಭೇಟಿ ಮಾಡಿದ್ದು, ಸೋನಿಯಾ ಗಾಂಧಿ ಅವರನ್ನು. ಇದು ತನಿಖಾ ಸಂಸ್ಥೆಗಳಿಗೆ ಒಂದು ಸಂದೇಶವಾಗಿತ್ತು, ಏಕೆಂದರೆ ಅವರು ಶಶಿ ತರೂರ್ ಸೋನಿಯಾ ಗಾಂಧಿ ಅವರ ಬೆಂಬಲವನ್ನು ಹೊಂದಿದ್ದರು. ನಾನು ಯಾವಾಗ ಬೇಕಾದರೂ ಭಾರತಕ್ಕೆ ಮರಳಬಹುದು ಎಂದು ಲಲಿತ್ ಮೋದಿ ಹೇಳಿದ್ದಾರೆ. 2025ರ ಐಪಿಎಲ್‌ಗೆ ಹರಾಜು ಪ್ರಕ್ರಿಯೆ ಮುಗಿದ ಬೆನ್ನಲ್ಲಿಯೇ ಲಲಿತ್ ಮೋದಿ (Lalit Modi) ಈ ಸ್ಫೋಟಕ ಆರೋಪ ಮಾಡಿದ್ದು, ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಮತ್ತು ಎನಾಗಲಿದೆ ಎಂದು ಕಾದು ನೋಡಬೇಕಿದೆ.