ಕ್ರೀಡೆ

VIDEO| ಲಂಕಾ ಲೀಗ್​ನಲ್ಲಿ ಹಾವಿನಿಂದ ಸ್ವಲ್ಪದರಲ್ಲೇ ಪಾರಾದ ಫೀಲ್ಡರ್​!

ಕೊಲಂಬೊ: ಶ್ರೀಲಂಕಾದ ಲಂಕಾ ಪ್ರೀಮಿಯರ್​ ಲೀಗ್​ (ಎಲ್​ಪಿಎಲ್​) ಪಂದ್ಯಗಳಿಗೆ ಹಾವಿನ ಕಾಟ ಎದುರಾಗಿದೆ. ಶನಿವಾರ ನಡೆದ ಪಂದ್ಯದ ವೇಳೆ ಜಾ್ನಾ ಕಿಂಗ್​ ವಿರುದ್ಧದ ಪಂದ್ಯದಲ್ಲಿ ಕ್ಯಾಂಡಿ ತಂಡ ಫೀಲ್ಡಿಂಗ್​ ನಡೆಸುತ್ತಿದ್ದಾಗ ಹಾವು ಮೈದಾನಕ್ಕೆ ನುಗ್ಗಿತ್ತು. ಇದನ್ನು ಗಮನಿಸದ ಕ್ಯಾಂಡಿ ತಂಡದ ವೇಗಿ ಇಸುರು ಉದಾನ ಹಿಮ್ಮುಖವಾಗಿ ನಡೆಯುತ್ತಿದ್ದಾಗ ಹಾವನ್ನು ಮೆಟ್ಟಿ ಕಡಿತಕ್ಕೊಳಗಾಗುವುದು ಸ್ವಲ್ಪದರಲ್ಲೇ ತಪ್ಪಿದೆ.

ಅತ್ಯಂತ ಸಮೀಪದಲ್ಲಿ ಹಾವನ್ನು ಕಂಡು ಬೆಚ್ಚಿದ ಉದಾನ ಕೂಡಲೆ ದೂರ ತೆರಳಿ ಪಾರಾದರು. ಬಳಿಕ ಬೌಂಡರಿ ಗೆರೆಯ ಬಳಿಕ ವೈರುಗಳ ನಡುವೆ ತೆರಳಿದ ಹಾವು, ಕ್ಯಾಮರಾಮನ್​ಗೂ ಭೀತಿ ಹುಟ್ಟಿಸಿತು.

ಈ ಮುನ್ನ ಟೂರ್ನಿಯಲ್ಲಿ ಜುಲೈ 31ರಂದು ನಡೆದ ಗಾಲೆ-ಡಂಬುಲಾ ಪಂದ್ಯದ ವೇಳೆಯೂ ಮೈದಾನದಲ್ಲಿ ಹಾವು ಕಾಣಿಸಿಕೊಂಡಿತ್ತು.