ಕ್ರೀಡೆ

ಅಡಿಯಿಂದ ಮುಡಿಯವರೆಗೂ ಕಂಬಳಿ ಹೊದ್ದು ಮಲಗುತ್ತೀರಾ? ಈ ಆರೋಗ್ಯ ಸಮಸ್ಯೆ ಕಾಡುತ್ತೆ ಹುಷಾರ್​! Sleeping

Sleeping : ನಿದ್ರೆ ಎಂಬುದು ಮನುಷ್ಯರಿಗೆ ಅತ್ಯಂತ ಅಗತ್ಯವಾದ ವಿಷಯಗಳಲ್ಲಿ ಒಂದಾಗಿದೆ. ಚೆನ್ನಾಗಿ ನಿದ್ರೆ ಮಾಡಿದರೆ ಮಾತ್ರ ನಾವು ಮರುದಿನ ಉಲ್ಲಾಸದಿಂದ ಎಚ್ಚರಗೊಳ್ಳಬಹುದು ಮತ್ತು ದಿನವಿಡೀ ಆ್ಯಕ್ಟೀವ್​ ಆಗಿರಬಹುದು. ಒಂದು ವೇಳೆ ನಿದ್ರೆ ಸರಿಯಾಗಿ ಆಗಿದ್ದರೆ ಅದರ ಪರಿಣಾಮ ಇಡೀ ದಿನ ಇರುತ್ತದೆ.

ಕೆಲವರು ಮಲಗುವಾಗ ಮುಖ ಸೇರಿದಂತೆ ಅಡಿಯಿಂದ ಮುಡಿಯವರೆಗೂ ಬೆಡ್​ಶೀಟ್​ ಅನ್ನು ಹೊದ್ದು ಮಲಗುತ್ತಾರೆ. ನೀವು ಕೂಡ ಈ ರೀತಿ ಮಲಗಲು ಇಷ್ಟಪಡುವವರಾಗಿದ್ದರೆ ಕೊಂಚ ಜಾಗರೂಕರಾಗಿರಿ. ಏಕೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬಿಸಿಯಾಗಿರಲಿ ಅಥವಾ ಶೀತವಾಗಿರಲಿ ತಲೆಯನ್ನು ಕಂಬಳಿಯಿಂದ ಮುಚ್ಚಿಕೊಳ್ಳುವ ಜನರಿದ್ದಾರೆ. ಆದರೆ, ಈ ಅಭ್ಯಾಸ ಅಷ್ಟು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಅಪಾಯಕಾರಿ ಅಭ್ಯಾಸ. ಇದರಿಂದಾಗಿ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ದೇಹವನ್ನು ಪ್ರವೇಶಿಸುತ್ತದೆ. ನಾವು ತಲೆಯನ್ನು ಮುಚ್ಚಿದಾಗ, ನಾವು ಬಿಡುಗಡೆ ಮಾಡುವ ಇಂಗಾಲದ ಡೈಆಕ್ಸೈಡ್ ಒಳಗೇ ಉಳಿಯುತ್ತದೆ. ನಾವು ಮತ್ತೆ ಉಸಿರಾಡುವಾಗ ಈ ಇಂಗಾಲದ ಡೈಆಕ್ಸೈಡ್ ದೇಹವನ್ನು ಪ್ರವೇಶಿಸುತ್ತದೆ.

ನಮ್ಮ ದೇಹವನ್ನು ಮರಳಿ ಪ್ರವೇಶಿಸುವ ಇಂಗಾಲದ ಡೈಆಕ್ಸೈಡ್ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಕ್ರಮೇಣ ಇದು ಸ್ಮರಣಶಕ್ತಿಯ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ತಲೆಯ ಮೇಲೆ ಕಂಬಳಿ ಹಾಕಿಕೊಂಡು ಮಲಗುವುದನ್ನು ನಿಲ್ಲಿಸಲು ಪ್ರಯತ್ನಿಸಿ. ಅಲ್ಲದೆ, ಮಲಗುವಾಗ ಯಾವಾಗಲೂ ಹಾಸಿಗೆಯ ಎಡಭಾಗದಲ್ಲಿ ಮಲಗಿ.

ಮಲಗುವ ಮುನ್ನ ಅತಿಯಾಗಿ ತಿನ್ನುವುದನ್ನು ತಪ್ಪಿಸುವುದು ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಮಲಗುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಈ ಅಭ್ಯಾಸವನ್ನು ಅನುಸರಿಸುವವರು ಬೆಳಿಗ್ಗೆ ಹೆಚ್ಚು ಉಲ್ಲಾಸದಿಂದ ಇರುತ್ತಾರೆ ಎಂದು ಹೇಳಲಾಗಿದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.