ಮುಂಬೈ: ನಿನ್ನೆ (ಏಪ್ರಿಲ್ 11) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳ ನಡುವೆ ನಡೆದ ಭಾರೀ ಹಣಾಹಣಿಯಲ್ಲಿ 7 ವಿಕೆಟ್ಗಳ ಅಂತರದಿಂದ ಹಾರ್ದಿಕ್ ಪಡೆ ಗೆದ್ದು ಬೀಗಿತು. ಒಳ್ಳೆಯ ಮನರಂಜನೆ ನೀಡಿದ ಈ ಪಂದ್ಯದಲ್ಲಿ ಆರ್ಸಿಬಿಯ ಸತತ ಸೋಲು ಅಭಿಮಾನಿಗಳನ್ನು ತೀವ್ರ ಬೇಸರಕ್ಕೆ ಕಾರಣವಾಗಿದೆ. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 197 ರನ್ಗಳ ಬೃಹತ್ ಟಾರ್ಗೆಟ್ ನೀಡಿದರೂ ಮುಂಬೈ ಈ ಗುರಿಯನ್ನು ಅತ್ಯಂತ ಸುಲಭವಾಗಿ ತಲುಪಿತು. ಪಂದ್ಯದಲ್ಲಿ ಆರ್ಸಿಬಿ ಬ್ಯಾಟ್ಸ್ಮನ್ಗಳಿಗೆ ಕಾಡಿದ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಪಡೆದು ಮಿಂಚಿದರು.
ಮುಂಬೈ ಪಂದ್ಯ ಗೆಲ್ಲುತ್ತಿದ್ದಂತೆ ಬುಮ್ರಾಗೆ ತಲೆಬಾಗಿದ ಆರ್ಸಿಬಿ ವೇಗಿ ಮೊಹ್ಮಮದ್ ಸಿರಾಜ್ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್ಸಿಬಿ ವಿರುದ್ಧ ನಾಲ್ಕು ಓವರ್ಗಳನ್ನು ಮಾಡಿದ ಬುಮ್ರಾ, ಕೇವಲ 21 ರನ್ಗಳನ್ನು ಕೊಟ್ಟು ಐವರು ಬಲಿಷ್ಠ ಆಟಗಾರರ ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಪಂದ್ಯದಲ್ಲಿ ಅದ್ದೂರಿ ಪ್ರದರ್ಶನದ ನೀಡಿದ ಜಸ್ಪ್ರೀತ್ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಲಭಿಸಿತು.
ಒಂದೆಡೆ ಸಿರಾಜ್ ಕ್ರೀಡಾಸ್ಪೂರ್ತಿ ಮೆರೆದಿದ್ದಕ್ಕೆ ಫ್ಯಾನ್ಸ್ ಸಂತಸಪಟ್ಟರೆ, ಮತ್ತೊಂದೆಡೆ ತಂಡದಲ್ಲಿ ಅಂತಹದ್ದೇ ಪರ್ಫಾಮೆನ್ಸ್ ನೀವ್ಯಾಕೆ ತೋರಲಿಲ್ಲ. ಮುಂಬೈ ಪರ ಬುಮ್ರಾ ಒಬ್ಬರೆ ಎದುರಾಳಿಗಳ ಐದು ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: ಇದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ: ಕೆಲ ಬಾಲಿವುಡ್ ಸೆಲೆಬ್ರಿಟಿ ದಂಪತಿಯ ಮದ್ವೆ ಹಿಂದಿನ ಗುಟ್ಟು ಬಿಚ್ಚಿಟ್ಟ ನೋರಾ!
ಆದರೆ, ನಮ್ಮ ತಂಡದಲ್ಲಿ ಮೂರು ವಿಕೆಟ್ ತೆಗೆಯಲಷ್ಟೇ ಶಕ್ತವಾಗಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಆರ್ಸಿಬಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಸತತ ಸೋಲುಗಳಿಂದ ಸಾಗುತ್ತಿರುವ ಆರ್ಸಿಬಿ ಹೇಗೆ ಮುಂಬರುವ ಪಂದ್ಯಗಳಲ್ಲಿ ಪುಟಿದೇಳಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).