More

  ಇದೆನಾ ನಿಮ್ಮ ಕೆಲ್ಸ? ಆರ್​ಸಿಬಿ-ಮುಂಬೈ ಪಂದ್ಯದ ಬೆನ್ನಲ್ಲೇ ಆಕ್ರೋಶದ ಕಿಡಿ ಹೊತ್ತಿಸಿದ ಯುವತಿಯ ಫೋಟೋ!

  ಮುಂಬೈ: ಪ್ರಖ್ಯಾತ ಕ್ರಿಕೆಟ್​ ಇನ್ಫ್ಲುಯೆನ್ಸರ್ ಮುಫದ್ದಲ್ ವೋಹ್ರಾ​ ತನ್ನ ಎಕ್ಸ್​ ಖಾತೆಯಲ್ಲಿ ಯುವತಿಯೊಬ್ಬಳ ಫೋಟೋ ಪೋಸ್ಟ್​ ಮಾಡಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ನಿನ್ನೆ (ಏಪ್ರಿಲ್​) ಆರ್​ಸಿಬಿ ಮತ್ತು ಮುಂಬೈ ನಡುವೆ ನಡೆದ ಐಪಿಎಲ್​ ಪಂದ್ಯದ ನಡುವೆ ಸೆರೆಹಿಡಿದ ಫೋಟೋ ಇದಾಗಿದೆ. ಇದನ್ನು ಶೇರ್​ ಮಾಡಿದ್ದಕ್ಕೆ ಎಕ್ಸ್​ ಬಳಕೆದಾರರೊಬ್ಬರು ಖಂಡಿಸಿದ್ದಾರೆ.

  ಐಪಿಎಲ್​-2024 ಕ್ರೇಜ್​ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳು ಹರಿದಾಡುತ್ತಿದೆ. ಆದರೆ, ಐಪಿಎಲ್​ನಲ್ಲಿ ಇತ್ತೀಚಿನ ಟ್ರೆಂಡ್ ಇದೀಗ​ ಟೀಕೆಗೆ ಗುರಿಯಾಗಿದೆ. ಕ್ರೀಡಾಂಗಣಕ್ಕೆ ಬರುವ ಅನೇಕರ ಮಹಿಳೆಯರಲ್ಲಿ ನಿರ್ದಿಷ್ಟ ಮಹಿಳೆಯರ ಚಿತ್ರವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅನುಮತಿ ಇಲ್ಲದೆ ಪೋಸ್ಟ್​ ಮಾಡುವುದನ್ನು ನುಪುರ್​ ಹೆಸರಿನ ಎಕ್ಸ್​ ಬಳಕೆದಾರರು ಟೀಕಿಸಿದ್ದಾರೆ. ನಿಜಕ್ಕೂ ಇದು ಖಂಡನೀಯ ಎಂದಿದ್ದಾರೆ.

  ಆದರೆ, ಟೀಕೆಗೆ ಮುಫದ್ದಲ್ ವೋಹ್ರಾ​ ಪ್ರತಿಕ್ರಿಯೆ ನೀಡಿದ್ದು, ಆಕೆಯ ಒಪ್ಪಿಗೆ ಪಡೆದಿದ್ದೇನೆ. ಫೋಟೋ ಪೋಸ್ಟ್ ಮಾಡುವಂತೆ ಆಕೆಯ ನನ್ನ ಬಳಿ ಕೇಳಿಕೊಂಡರು. ಆಕೆಗೆ ಇನ್​ಸ್ಟಾಗ್ರಾಂನಲ್ಲಿ 1 ಲಕ್ಷದ 50 ಸಾವಿರಕ್ಕೂ ಅಧಿಕ ಫಾಲೋವರ್ಸ್​ ಇದಾರೆ ಎನ್ನುವ ಮೂಲಕ ನೂಪುರ್​ ಟೀಕೆಗೆ ತಿರುಗೇಟು ನೀಡಿದ್ದಾರೆ.

  ಅಂದಹಾಗೆ ಈ ಮುಫದ್ದಾಲ್ ವೋಹ್ರಾ ಅವರು ಎಕ್ಸ್​ (ಈ ಹಿಂದೆ ಟ್ವಿಟರ್​) ನಲ್ಲಿ 850K ಫಾಲೋವರ್ಸ್​ ಮತ್ತು ಇನ್​ಸ್ಟಾಗ್ರಾಂನಲ್ಲಿ 85K ಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಪ್ರಖ್ಯಾತ ಸೋಶಿಯಲ್​ ಮೀಡಿಯಾ ಕ್ರಿಕೆಟ್ ಇನ್ಫ್ಲುಯೆನ್ಸರ್​. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗಿರುವ ವೋಹ್ರಾ, ಐಪಿಎಲ್ ಪಂದ್ಯಗಳ ವೇಳೆ ಆಟಗಾರರು ಮತ್ತು ಅಭಿಮಾನಿಗಳ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ವೊಹ್ರಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೆಲ ವಿಷಯವನ್ನು ಪ್ರಚಾರ ಮಾಡಲು ಹಣ ಸಹ ಪಡೆಯುತ್ತಾರೆ ಎಂದು ವರದಿಯಾಗಿದೆ.

  ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಡುಪ್ಲೆಸಿಸ್ (61), ರಜತ್ ಪಾಟಿದಾರ್ (50), ಡಿಕೆ (53*) ರನ್ ಗಳಿಸಿ ಮಿಂಚಿದರು. ಬಳಿಕ 197 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ 15.3 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳ ಪೈಕಿ ಇಶಾನ್ ಕಿಶನ್ (69), ರೋಹಿತ್ (38) ಮತ್ತು ಸೂರ್ಯಕುಮಾರ್ (52) ರನ್‌ಗಳೊಂದಿಗೆ ಮಿಂಚಿದರು. (ಏಜೆನ್ಸೀಸ್​)

  ಈ ರೀತಿ ಮಾಡ್ಬೇಡಿ… ಮುಂಬೈ ಕ್ರೀಡಾಭಿಮಾನಿಗಳಿಗೆ ಬುದ್ಧಿಮಾತು ಹೇಳಿ ಕ್ರೀಡಾಸ್ಫೂರ್ತಿ ಮೆರೆದ ಕೊಹ್ಲಿ

  ಇದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ: ಕೆಲ ಬಾಲಿವುಡ್​ ಸೆಲೆಬ್ರಿಟಿ ದಂಪತಿಯ ಮದ್ವೆ ಹಿಂದಿನ ಗುಟ್ಟು ಬಿಚ್ಚಿಟ್ಟ ನೋರಾ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts