ನವದೆಹಲಿ: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ ವಿಶ್ವ ಕ್ರಿಕೆಟ್ನ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದು, ಬ್ಯಾಟಿಂಗ್ ಶೈಲಿಯ ಮೂಲಕವೇ ತಮ್ಮ ಸಾಮಥ್ಯವನ್ನು ಪ್ರದರ್ಶಿಸಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದ ಗಿಲ್ ಮುಂದಿನ ದಿನಗಳಲ್ಲಿ ಭಾರತ ತಂಡದ ನಾಯಕರಾದರೆ ಟೀಮ್ಗೆ ಒಳಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಇನ್ನೂ ಇದಕ್ಕೆ ಧ್ವನಿಗೂಡಿಸಿರುವ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಗಿಲ್ ನಾಯಕನಾಗುವುದು ಸೂಕ್ತ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ವಿಕ್ರಮ್ ರಾಥೋರ್, ಗುಜರಾತ್ ಟೈಟಾನ್ಸ್ ಹಾಗೂ ಜಿಂಬಾಬ್ವೆ ಸರಣಿಯಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸುವಾಗ ಅವರ ಬಾಡಿ ಲಾಂಗ್ವೇಜ್ ನೋಡಿ ಈತನೇ ಭಾರತ ತಂಡದ ನಾಯಕನಾಗಲು ಸೂಕ್ತ ಎನಿಸಿತು. ಈಗ ಆತನಿಗೆ ಉಪನಾಯಕತ್ವ ನೀಡುವ ಮೂಲಕ ಆತನಿಗೆ ಬಿಸಿಸಿಐ ಜವಾಬ್ದಾರಿಯನ್ನು ನೀಡಿದ್ದು, ಆತ ದೊಡ್ಡ ಸ್ಥಾನ ಸಿಗುವ ನಿರೀಕ್ಷೆ ಇದೆ.
ನನ್ನ ಪ್ರಕಾರ ವಿರಾಟ್ ಹಾಗೂ ರೋಹಿತ್ರಿಂದ ಅತ್ಯುತ್ತಮವಾದುದನ್ನು ಹೊರತಂದಿದೆ ಎಂದು ನಾನು ಭಾವಿಸುತ್ತೇನೆ. ಶುಭಮನ್ ವಿಚಾರದಲ್ಲೂ ಇದೇ ಆಗುತ್ತದೆ ಎಂದುಕೊಂಡಿದ್ದೇನೆ. ಆತ ಉಪನಾಯಕನಾಗಿರುವುದು ಸಹ ಉತ್ತಮವಾದುದನ್ನು ಹೊರತರುತ್ತದೆ ಎಂಬ ನಂಬಿಕೆ ನನಗಿದೆ. ಶುಭಮನ್ನಂತಹ ಯುವಕರಿಗೆ ತಂಡದ ನಾಯಕತ್ವ ನೀಡುವುದು ನನ್ನ ಪ್ರಕಾರ ಸೂಕ್ತ ಎನಿಸುತ್ತದೆ. ಮುಂದಿನ ದಿನಗಳಲ್ಲಿ ಆತ ಮೂರು ಮಾದರಿಗಳಲ್ಲಿ ತಂಡವನ್ನು ಮುನ್ನಡೆಸುತ್ತಾನೆ ಎಂದು ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.