ಕ್ರೀಡೆ

ಕ್ಯಾಪ್ಟನ್​ ಆಟ ಪ್ರದರ್ಶಿಸಿದ ಗಿಲ್​ 'ಶತಕ ವೀರ'; ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ | Shubman Gill

Shubman Gill: ಮ್ಯಾಚೆಂಸ್ಟರ್​ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ನ ಐದನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ನಾಯಕ ಶುಭಮನ್​ ಗಿಲ್ ಮಿಂಚಿದ್ದಾರೆ. ಕೇವಲ ಕ್ಯಾಪ್ಟನ್ ಆಟ ಪ್ರದರ್ಶಿಸದ ಗಿಲ್​, ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ 700ಕ್ಕೂ ಅಧಿಕ ರನ್ ಗಳಿಸಿದ ಮೊದಲ ಏಷ್ಯನ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಶುಭಮನ್​ ಇತಿಹಾಸ ನಿರ್ಮಿಸಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 101* ರನ್ ಗಳಿಸಿದ ಬೆನ್ನಲ್ಲೇ ಗಿಲ್​ ಈ ಮೈಲಿಗಲ್ಲು ತಲುಪಿದ್ದಾರೆ. ಇಷ್ಟೇ ಅಲ್ಲದೇ, ಟೆಸ್ಟ್ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಮೂರನೇ ಭಾರತೀಯ ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯನ್ ಬ್ಯಾಟ್ಸ್‌ಮನ್‌ಗಳಿವರು

ಶುಭಮನ್​ ಗಿಲ್ (ಭಾರತ) - 701* ರನ್‌

ಮೊಹಮ್ಮದ್ ಯೂಸುಫ್ (ಪಾಕಿಸ್ತಾನ) - 631 ರನ್‌

ರಾಹುಲ್ ದ್ರಾವಿಡ್ (ಭಾರತ) - 602 ರನ್‌

ವಿರಾಟ್ ಕೊಹ್ಲಿ (ಭಾರತ) - 593 ರನ್‌

ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆಯು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಹೆಸರಿನಲ್ಲಿದೆ. ಅವರ ನಂತರದ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಇದ್ದರೆ, ಶುಭಮನ್​ ಗಿಲ್ ಮೂರನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟೀಮ್ ಇಂಡಿಯಾ ಆಟಗಾರರಿವರು

  • ಸುನಿಲ್ ಗವಾಸ್ಕರ್ - 4 ಟೆಸ್ಟ್‌ಗಳಲ್ಲಿ 774 ರನ್‌ (ವೆಸ್ಟ್ ಇಂಡೀಸ್ ವಿರುದ್ಧ)
  • ಸುನಿಲ್ ಗವಾಸ್ಕರ್ - 6 ಪಂದ್ಯಗಳಲ್ಲಿ 732 ರನ್‌ ( ವೆಸ್ಟ್ ಇಂಡೀಸ್ ವಿರುದ್ಧ)
  • ಯಶಸ್ವಿ ಜೈಸ್ವಾಲ್ - 5 ಪಂದ್ಯಗಳಲ್ಲಿ 712 ರನ್‌ (ಇಂಗ್ಲೆಂಡ್ ವಿರುದ್ಧ)
  • ಶುಬ್‌ಮನ್ ಗಿಲ್ - 4 ಪಂದ್ಯಗಳಲ್ಲಿ 700* ರನ್‌ (2025ರಲ್ಲಿ ಇಂಗ್ಲೆಂಡ್ ವಿರುದ್ಧ)