ಬೆಂಗಳೂರು: ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಮಾರ್ಚ್ 22ರಂದು ರಾಯಕ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಅದ್ಧೂರಿ ಚಾಲನೆ ಸಿಗಲಿದೆ. ಮತ್ತು ಮೇ 26 ರಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ನನ್ನ ತಂದೆ ನಿರ್ದೇಶನದಲ್ಲಿ ನಟಿಸಲು ಇಷ್ಟವಿಲ್ಲ: ಶಾಕಿಂಗ್ ಹೇಳಿಕೆ ನೀಡಿದ ಖ್ಯಾತ ಡೈರೆಕ್ಟರ್ ಮಗ! ಕಾರಣ ಹೀಗಿದೆ..
2023ರ ಆವೃತ್ತಿಯಂತೆ, ಈ ವರ್ಷ 74 ಪಂದ್ಯಗಳನ್ನು ಆಡಲಾಗುತ್ತದೆ. ಆದರೆ ಕಳೆದ ವರ್ಷ 60 ದಿನಗಳ ಬದಲಿಗೆ, 67 ದಿನಗಳ ಕಾಲ ಪಂದ್ಯಗಳು ನಡೆಯಲಿದೆ. ಜೊತೆಗೆ 10 ತಂಡಗಳ ತವರು ನೆಲದಲ್ಲಿಯೂ ಪಂದ್ಯಗಳು ನಡೆಯಲಿದೆ.
ಅದರಂತೆ ಆರ್ಸಿಬಿ ತಂಡದ ತವರಿನ ಪಂದ್ಯಗಳು ಎಂದಿನಂತೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಆದರೆ ಇದೀಗ ಈ ಅದ್ಧೂರಿ ಟೂರ್ನಿಗೆ ಜಲಕಂಟಕ ಎದುರಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಮಾರ್ಚ್ ಮೊದಲ ವಾರದಲ್ಲೇ ನೀರಿಗಾಗಿ ತೀವ್ರ ಸಮಸ್ಯೆ ಎದುರಾಗಿದೆ.
ಬೆಂಗಳೂರಿನ ನೀರಿನ ಸಮಸ್ಯೆ ನಡುವೆ, ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸುವ ಕೂಗು ಉಲ್ಬಣಗೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ #CancelIPL ಟ್ರೆಂಡ್ ಆಗುತ್ತಿದೆ.
ನೀರಿನ ಬಿಕ್ಕಟ್ಟು ಹೆಚ್ಚಾದಂತೆ ಐಪಿಎಲ್ 2024ರ ಮೇಲೂ ಇದರ ಪರಿಣಾಮ ಬಿರಬಹುದು ಎನ್ನಲಾಗಿದೆ. ಏಕೆಂದರೆ ಐಪಿಎಲ್ ಕ್ಯಾನ್ಸಲ್ ಮಾಡುವಂತೆ ಎಕ್ಸ್ (ಟ್ವಿಟರ್) ನಲ್ಲಿ ಈಗಾಗಲೇ ಕ್ಯಾಂಪೇನ್ ಶುರುವಾಗಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೆ ಗೃಹ ಸಚಿವರಿಗೆ ಟ್ಯಾಗ್ ಮಾಡಿ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.
ಐಪಿಎಲ್ ಪಂದ್ಯಗಳ ಸಮಯದಲ್ಲಿ ಭಾರೀ ಪ್ರಮಾಣದ ನೀರಿನ ಬಳಕೆಯನ್ನು ಉಲ್ಲೇಖಿಸಿ, ನೆಟ್ಟಿಗರು ಪಂದ್ಯಗಳ ಸ್ಥಳಾಂತರಕ್ಕೆ ಒತ್ತಾಯಿಸುತ್ತಿದ್ದಾರೆ. ಇದು ರಾಜಕೀಯ ಪಕ್ಷಗಳವರೆಗೂ ಸುದ್ದಿ ತಲುಪಿದೆ.
ಮಾರ್ಚ್ 29ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2024ರ ಐಪಿಎಲ್‌ನ ಮೊದಲ ಪಂದ್ಯ ನಡೆಯಲಿದ್ದು, ಬಿಸಿಸಿಐ ತಮ್ಮ ಮನವಿಗೆ ಮಣಿದು ನೀರಿನ ಕೊರತೆಯಿಲ್ಲದ ರಾಜ್ಯಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂದು ನಾಗರಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ಒಂದು ವೇಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಮ್ಯಾಚ್ಗಳನ್ನು ಆಯೋಜಿಸಿದರೆ ಪ್ರತಿ ಪಂದ್ಯವು ಲಕ್ಷಾಂತರ ಲೀಟರ್ ನೀರನ್ನು ಬೇಡುತ್ತದೆ. ಇದು ಬೆಂಗಳೂರಿನಲ್ಲಿ ಈಗಾಗಲೇ ಖಾಲಿಯಾಗಿರುವ ನೀರಿನ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೆಚ್ಚಸಲಿದೆ.