ಕ್ರೀಡೆ

ಫೈನಲ್​ನಲ್ಲಿ ಇಂಗ್ಲೆಂಡ್ ಎದುರಿಸಬೇಕಿರುವುದು ಭಾರತೀಯ ಬೌಲರ್​ಗಳನ್ನಲ್ಲಾ, ಪಾಕ್ ಬೌಲರ್​ಗಳನ್ನು; ಶೋಯೆಬ್ ಅಖ್ತರ್

ನವದೆಹಲಿ: ಟಿ-20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೋಲೆಪ್ಪಿಕೊಳ್ಲುತ್ತಿದ್ದಂತೆ ಹಲವು ಟೀಕೆಗಳು, ವ್ಯಂಗ್ಯದ ಮಾತುಗಳು ವ್ಯಕ್ತವಾಗುತ್ತಲೇ ಇವೆ. ಇದೀಗ ಪಾಕಿಸ್ತಾನ ಮಾಜಿ ಬೌಲರ್ ಶೋಯೆಬ್ ಅಖ್ತರ್, ಭಾರತೀಯ ಬೌಲರ್​ಗಳ ಮೇಲೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ-20 ವಿಶ್ವಕಪ್​ನ ಫೈನಲ್ ಪಂದ್ಯ ನಡೆಯಲಿದೆ. ಎರಡು ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ. ಹೀಗಾಗಿ ಈಗಾಗಲೇ ಎರಡೂ ತಂಡಗಳು ನೆಟ್ಸ್​​​ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಈ ನಡುವೆ ಶೋಯೆಬ್​ ಅಖ್ತರ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಮಗೆ ಎದುರಾಳಿಯಾಗಿ ಸಿಕ್ಕಿರುವುದು ಇಂಗ್ಲೆಂಡ್ ತಂಡ. ಭಾರತವನ್ನು ಸೋಲಿಸಿದ ನಂತರ ಅವರ ಆತ್ಮವಿಶ್ವಾಸ ಹೆಚ್ಚಿದೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್​​ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲು ಕಠಿಣ ಅಭ್ಯಾಸಕ್ಕೆ ಮುಂದಾಗಿದೆ. ನಾವು ಭಾರತೀಯ ಬೌಲರ್​ಗಳನ್ನಲ್ಲಾ, ಪಾಕಿಸ್ತಾನ ಬೌಲರ್​ಗಳನ್ನು ಎದುರಿಸಬೇಕಿರುವುದು ಎಂಬುವುದನ್ನು ಇಂಗ್ಲೆಂಡ್ ತಂಡ ಮನವರಿಕೆ ಮಾಡಿಕೊಂಡಿದೆ. ಹೀಗಾಗಿ ಪಾಕಿಸ್ತಾನವನ್ನು ಸೋಲಿಸಲು ಇಂಗ್ಲೆಂಡ್ ತಂಡ ಮೈದಾನದಲ್ಲಿ ಸಾಕಷ್ಟು ಪರಿಶ್ರಮ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)