ನವದೆಹಲಿ: ಎರಡು ದಿನಗಳ ಹಿಂದಷ್ಟೇ ಜಿಮ್‌ನಲ್ಲಿ ಭರ್ಜರಿ ವರ್ಕ್‌ಔಟ್ ಮಾಡುವ ಮೂಲಕ ಬಾಲಿವುಡ್ ಮಂದಿ ಗಮನಸೆಳೆದಿದ್ದ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸೋಮವಾರ ಅಡುಗೆ ಮಾಡುವ ಮೂಲಕ ಗಮನಸೆಳೆದಿದ್ದಾರೆ. ‘ಚೀಸ್ ಬಟ್ಟರ್ ಮಸಾಲ’ ಮಾಡಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪಾಂಡ್ಯ ಹಂಚಿಕೊಂಡಿದ್ದಾರೆ. ಇದಕ್ಕೆ ಪತ್ನಿ ನತಾಶಾ ಸೇರಿದಂತೆ ಹಲವು ಮಂದಿ ಪ್ರತಿಕ್ರಿಯಿಸಿದ್ದಾರೆ. ಸಹ-ಆಟಗಾರ ಶಿಖರ್ ಧವನ್, ನಂಬೋದಿಕ್ಕೆ ಆಗುತ್ತಿಲ್ಲ. ಹಾರ್ದಿಕ್ ಅಡಿಗೆ ಮಾಡಿರೋದ ಎಂದು ಹಲವು ಎಮೋಜಿಗಳನ್ನು ಹಾಕಿ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಮೂರು ತಿಂಗಳ ಬಳಿಕ ಬ್ಯಾಟ್ ಹಿಡಿದ ಚೇತೇಶ್ವರ ಪೂಜಾರ
ಜಿಮ್‌ನಲ್ಲಿ ಭರ್ಜರಿ ದೈಹಿಕ ಕಸರತ್ತು ಮಾಡುವ ಮೂಲಕ ಅಣ್ಣ ಕೃನಾಲ್ ಪಾಂಡ್ಯಗೆ ಹಾರ್ದಿಕ್ ಫಿಟ್ನೆಸ್ ಚಾಲೆಂಜ್ ಹಾಕಿದ್ದರು. ಹಾರ್ದಿಕ್ ಫಿಟ್ನೆಸ್ ಬಗ್ಗೆ ಬಾಲಿವುಡ್ ನಟಿಯರಾದ ಸಿಯಾಮಿ ಖೇರ್, ಕರಿಷ್ಯಾ ತನ್ನಾ ಸೇರಿದಂತೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.