ಕ್ರೀಡೆ

ಡ್ರಗ್ಸ್ ಪ್ರಕರಣ; ಶ್ರೀಲಂಕಾ ಕ್ರಿಕೆಟಿಗ ಅಮಾನತು

ಕೊಲಂಬೊ: ಡ್ರಗ್ಸ್ ಪ್ರಕರಣದಲ್ಲಿ ವೇಗಿ ಶೆಹನ್ ಮದುಶಂಕಾ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಎಲ್ಲ ಕ್ರಿಕೆಟ್ ಪ್ರಕಾರಗಳಿಂದ ಅಮಾನತುಗೊಳಿಸಿದೆ.

25 ವರ್ಷದ ಮದುಶಂಕಾ 2 ದಿನಗಳ ಹಿಂದಷ್ಟೇ ಹೆರಾಯಿನ್ ಹೊಂದಿದ್ದ ಆರೋಪದ ಮೇರೆಗೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. 2018ರ ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅವರು ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದರು. ತಕ್ಷಣದಿಂದಲೇ ಅನ್ವಯಿಸುವಂತೆ ಮದುಶಂಕಾರನ್ನು ಅಮಾನತುಗೊಳಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಶಿಸ್ತು ಸಮಿತಿ ಯಿಂದ ವಿಚಾರಣೆ ನಡೆಸಲಾಗುವುದು ಎಂದು ಲಂಕಾ ಮಂಡಳಿ ಕಾರ್ಯದರ್ಶಿ ಮೋಹನ್ ಡಿಸಿಲ್ವ ತಿಳಿಸಿದ್ದಾರೆ.