More

    ನೂರಾರು ಬೀದಿನಾಯಿಗಳಿಗೆ ಹಾಕಿ ಆಟಗಾರ ಆಸರೆ

    ಜಲಂಧರ್: ಅಂತಾರಾಷ್ಟ್ರೀಯ ಹಾಕಿ ಆಟಗಾರ ಜಸ್ಜಿತ್ ಸಿಂಗ್ ಕುಲಾರ್ ಲಾಕ್‌ಡೌನ್ ಆರಂಭವಾದ ಕೆಲದಿನಗಳ ನಂತರ ಮಾರ್ಚ್ 25ರಿಂದಲೂ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದೇಳುತ್ತಿದ್ದಾರೆ. ಆದರೆ ಹಾಕಿ ತರಬೇತಿ ಪಡೆಯುವುದಕ್ಕಲ್ಲ. ಬದಲಾಗಿ ನೂರಾರು ಬೀದಿನಾಯಿಗಳಿಗೆ ಉಣಿಸುವ ಆಹಾರವನ್ನು ಸಿದ್ಧಪಡಿಸಲು! ಹೌದು, ಜಸ್ಜಿತ್ ಸಿಂಗ್ ಕಳೆದ 2 ತಿಂಗಳಿನಿಂದ ಜಲಂಧರ್ ಸಮೀಪದ ತಮ್ಮ ಗ್ರಾಮ ಸನ್ಸಾರ್‌ಪುರದಲ್ಲಿ ನೂರಾರು ಬೀದಿನಾಯಿಗಳಿಗೆ ಆಸರೆಯಾಗಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಧೋನಿಗೆ ಗೆಲುವಿನ ಆಸೆಯೇ ಇರಲಿಲ್ಲ, ಸ್ಟೋಕ್ಸ್ ಬೌನ್ಸರ್!

    ಬೆಳಗ್ಗೆ ಬೇಗನೆ ಎದ್ದು ಚಿಕನ್ ಸೂಪ್, ಚಪಾತಿ, ಸೋಯಾ ತುಂಡಿನ ಆಹಾರವನ್ನು ಸಿದ್ಧಪಡಿಸುತ್ತಿದ್ದಾರೆ. ಜತೆಗೆ ಅಂಗಡಿಯಿಂದ ಖರೀದಿಸಿದ ಬ್ರೆಡ್ ಮತ್ತಿತರ ನಾಯಿಯ ಆಹಾರದೊಂದಿಗೆ ಮನೆಯಿಂದ 500 ಮೀಟರ್ ಸಮೀಪದ ಪ್ರದೇಶಗಳಿಗೆ ತೆರಳಿ ಬೀದಿನಾಯಿಗಳಿಗೆ ಆಹಾರ ಉಣಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಈ ಬೀದಿನಾಯಿಗಳಿಗೆ ಸ್ಥಳೀಯ ರೆಸ್ಟೋರೆಂಟ್, ಹೋಟೆಲ್ ಮತ್ತು ಹೈವೇಯಲ್ಲಿನ ಡಾಬಾಗಳಲ್ಲಿ ಆಹಾರ ಸಿಗುತ್ತಿದ್ದವು. ಆದರೆ ಲಾಕ್‌ಡೌನ್ ಶುರುವಾದ ನಂತರ ಈ ಬೀದಿನಾಯಿಗಳು ಆಹಾರ ಸಿಗದೆ ಪರದಾಡುತ್ತಿದ್ದವು. ಆಗ ಜಸ್ಜಿತ್ ಸಿಂಗ್ ಅವುಗಳಿಗೆ ಆಸರೆಯಾಗಿ ನಿಂತರು.

    ಇದನ್ನೂ ಓದಿ: ಅಫ್ರಿದಿಯಿಂದ ಪಾಕಿಸ್ತಾನಕ್ಕೆ ಕೆಟ್ಟ ಹೆಸರು ಎಂದ ಕನೇರಿಯಾ

    ತಮ್ಮ ಮನೆಯಲ್ಲಿಯೇ 3 ಶ್ವಾನಗಳನ್ನು ಹೊಂದಿರುವ ಜಸ್ಜಿತ್ ಸಿಂಗ್, ಜಲಂಧರ್ ಮೂಲದ ಪ್ರಾಣಿ ರಕ್ಷಣಾ ಫೌಂಡೇಷನ್ ಜತೆಗೂಡಿ ಈ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಅವರು ತಮ್ಮ ಗೆಳೆಯರಾಗಿರುವ ಓರ್ವ ಅಥ್ಲೀಟ್, ಸಂಗೀತಗಾರ, ಛಾಯಾಗ್ರಾಹಕ, ಐಟಿ ಉದ್ಯೋಗಿ ಮತ್ತು ಲೈಬ್ರೇರಿಯನ್ ನೆರವನ್ನೂ ಪಡೆದುಕೊಂಡಿದ್ದಾರೆ. ಇವರೆಲ್ಲರೂ ಜತೆಯಾಗಿ ನಗರದ 25 ಕಿಲೋಮೀಟರ್ ವ್ಯಾಪ್ತಿಯ ರಸ್ತೆಗಳಲ್ಲಿ 500ಕ್ಕೂ ಅಧಿಕ ಶ್ವಾನಗಳಿಗೆ ಆಹಾರ ಉಣಿಸುತ್ತಿದ್ದಾರೆ. ಪ್ರಾಣಿ ರಕ್ಷಣಾ ಫೌಂಡೇಷನ್ ವತಿಯಿಂದ ಒಟ್ಟಾರೆಯಾಗಿ ಸಾವಿರಕ್ಕೂ ಅಧಿಕ ಬೀದಿನಾಯಿಗಳಿಗೆ ಆಹಾರ ಉಣಿಸಲಾಗುತ್ತಿದ್ದು, 16 ಸ್ವಯಂಸೇವಕರು ಇದರಲ್ಲಿ ಒಳಗೊಂಡಿದ್ದಾರೆ.

    ಇದನ್ನೂ ಓದಿ: ಗಂಗೂಲಿ-ದ್ರಾವಿಡ್ ಅಮೋಘ ಜತೆಯಾಟಕ್ಕೆ 21 ವರ್ಷ!

    ಭಾರತ ಹಾಕಿ ತಂಡದ ಪರ 65 ಪಂದ್ಯಗಳನ್ನು ಆಡಿರುವ 30 ವರ್ಷದ ಜಸ್ಜಿತ್ ಸಿಂಗ್, 2018ರ ವಿಶ್ವ ಹಾಕಿ ಲೀಗ್‌ನಲ್ಲಿ ಕೊನೆಯದಾಗಿ ಆಡಿದ್ದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತೀಯ ರೈಲ್ವೇಸ್ ತಂಡದ ಪರ ಫಾರ್ವರ್ಡ್ ಆಟಗಾರರಾಗಿ ಅವರು ಈಗಲೂ ಆಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts