ಕ್ರೀಡೆ

ಈ ಒಂದು ಕಾರಣಕ್ಕೆ ನಾವು ಸೋತೆವು; ಟೀಮ್​ ಇಂಡಿಯಾ ವಿರುದ್ಧ ಸೋಲಿನ ಬಳಿಕ ಶಾಕಿಂಗ್​ ಹೇಳಿಕೆ ಕೊಟ್ಟ ಶಕೀಬ್

ಅಂಟಿಗುವಾ: ಇಲ್ಲಿನ ಸರ್​ ವಿವಿಯನ್​ ರಿಚರ್ಡ್​ ಕ್ರೀಡಾಂಗಣದಲ್ಲಿ ಟಿ-20 ವಿಶ್ವಕಪ್​ನ ಸೂಪರ್ 08 ಪಂದ್ಯದಲ್ಲಿ ಸರ್ವಾಂಗೀಣ ವೈಫಲ್ಯದ ಫಲವಾಗಿ ಟೀಮ್​ ಇಂಡಿಯಾ ಬಾಂಗ್ಲಾದೇಶ ಸೋಲುವ ಮೂಲಕ ಸೆಮೀಸ್​ ಹಾದಿಯನ್ನು ದುರ್ಗಮವಾಗಿಸಿಕೊಂಡಿದೆ. ಇನ್ನೂ ತಂಡದ ಪ್ರದರ್ಶನದ ಕುರಿತು ಕಿಡಿಕಾರಿರುವ ಶಕೀಬ್​ ಅಲ್​ ಹಸನ್​ ಸಹ ಆಟಗಾರರ ವಿರುದ್ಧ ಕಿಡಿಕಾರಿದ್ದಾರೆ.

ಶನಿವಾರ (ಜೂನ್ 22) ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ 196 ರನ್ ಗಳ ಗುರಿ ನೀಡಲಾಯಿತು. ಆದರೆ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶದ ವಿರುದ್ಧ ಭಾರತ 50 ರನ್‌ಗಳ ಜಯದೊಂದಿಗೆ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಪಂದ್ಯದ ಬಳಿಕ ಮಾತನಾಡಿದ ಶಕೀಬ್​ ಅಲ್​ ಹಸನ್​ ನಾವು ಏನಾದರೂ ಮಾಡಲು ಬಂದಿದ್ದೆವು ಮತ್ತು ಅದರ ಬಗ್ಗೆ ಹೆಚ್ಚಾಗೊಇ ಯೋಚಿಸುತ್ತಿದ್ದೇವೆ. ಆದರೆ ನೀವು ಫಲಿತಾಂಶ ಅಥವಾ ಮೈದಾನದಲ್ಲಿನ ಪ್ರದರ್ಶನವನ್ನು ನೋಡಿದರೆ, ವಾಸ್ತವವಾಗಿ ನಾವು ಆ ರೀತಿಯಲ್ಲಿ ಯಾವುದೇ ಹೋರಾಟವನ್ನು ತೋರಿಸಲು ಸಾಧ್ಯವಾಗಲಿಲ್ಲ. ಇದು ನಿರಾಶಾದಾಯಕವಾಗಿದೆ. ನಾವು ಎರಡು ದೊಡ್ಡ ತಂಡಗಳೊಂದಿಗೆ ಆಡಿ ಸೋತಾಗ ನಮ್ಮ ಅಂತರ ನಮಗೆ ತಿಳಿಯುತ್ತದೆ.

ಆದ್ದರಿಂದ, ನಾವು ಇನ್ನೂ ಅಂತಹ ದೊಡ್ಡ ಅಂತರವನ್ನು ಹೊಂದಿದ್ದೇವೆ ಎಂಬುದು ನನಗೆ ನಿರಾಶಾದಾಯಕವಾಗಿದೆ. ನಾವು ಆಡಿದ ರೀತಿ ಅಷ್ಟಾಗಿ ತೃಪ್ತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ನಾವು ಕಪ್​ ಗೆಲ್ಲುವ ವಿಶ್ವಾಸವಿದೆ ಎಂದು ಬಾಂಗ್ಲಾದೇಶ ತಂಡದ ಆಟಗಾರ ಶಕೀಬ್​ ಅಲ್​ ಹಸನ್​ ಹೇಳಿದ್ದಾರೆ.