ಕೊಲ್ಕತ್ತಾ: ನಿನ್ನೆ (ಏ.17) ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2024ರ ರಾಜಸ್ಥಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಭಾರೀ ಹಣಾಹಣಿ ನಡೆಯಿತು. 223 ರನ್‌ಗಳನ್ನು ಚೇಸ್ ಮಾಡಿ ಎರಡು ವಿಕೆಟ್ಗಳ ಅಂತರದಿಂದ ಆರ್ಆರ್ ಗೆದ್ದು ಬೀಗಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿ, ಕ್ರಿಕೆಟ್ ಫ್ಯಾನ್ಸ್ಗಳನ್ನು ಬೆರಗುಗೊಳಿಸಿತು.
ರಾಜಸ್ಥಾನ ತಂಡದ ಆರಂಭಿಕ ಬ್ಯಾಟ್ಸ್ಮನ್ ಆದ ಯಶಸ್ವಿ ಜೈಸ್ವಾಲ್ ಸದ್ಯ ತಮ್ಮ ಬ್ಯಾಟಿಂಗ್ ವೈಖರಿಯಿಂದಲೇ ಎಲ್ಲರ ಗಮನಸೆಳೆದಿದ್ದು, ಪಂದ್ಯ ಮುಗಿದ ಕೂಡಲೇ ತಮ್ಮದೊಂದು ಆಸೆಯನ್ನು ಈಡೇರಿಸಿಕೊಳ್ಳಲು ಬಯಸಿದರು. ಬಾಲಿವುಡ್ನ ಕಿಂಗ್ ಖಾನ್, ಸೂಪರ್‌ಸ್ಟಾರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕರಾದ ಶಾರುಖ್ ಖಾನ್ ಅವರನ್ನು ಭೇಟಿಯಾಗಲು ಜೈಸ್ವಾಲ್ ಬಹಳ ಉತ್ಸುಕರಾಗಿದ್ದರು.
ಕಡೆಗೂ ಜೈಸ್ವಾಲ್ ಆಸೆಯನ್ನು ಶಾರೂಖ್ ಖಾನ್ ಯಶಸ್ವಿಗೊಳಿಸಿದರು. ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಇಳಿದು ಬಂದ ಶಾರುಖ್, ಜೈಸ್ವಾಲ್ಗೆ ಕೈಮಿಲಾಯಿಸಿ, ಪ್ರೀತಿಯ ಅಪ್ಪುಗೆ ನೀಡಿದರು. ತನ್ನನ್ನು ನೋಡುತ್ತಿದ್ದಂತೆ ಕಣ್ತುಂಬಿಕೊಂಡ ಯಶಸ್ವಿಯ ಜತೆ ಫೋಟೋ ಕ್ಲಿಕ್ಕಿಸಿಕೊಂಡ ಕಿಂಗ್ ಖಾನ್, ಕೆಲವು ನಿಮಿಷಗಳು ಮಾತನಾಡಿ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಬಟ್ಲರ್ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಅಬ್ಬರಿಸಲು ಪ್ರಾರಂಭಿಸಿ ಯಶಸ್ವಿ ಜೈಸ್ವಾಲ್, 36 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು. ಇನ್ನು ಕಡೆಯ 2 ಓವರ್‌ಗಳಲ್ಲಿ 28 ರನ್‌ಗಳ ಅಗತ್ಯವಿದ್ದಾಗ, ಬಟ್ಲರ್ 19ನೇ ಎಸೆತದಲ್ಲಿ 19 ರನ್‌ಗಳನ್ನು ತೆಗೆದುಕೊಂಡರು ಮತ್ತು ಕೊನೆಯ 9 ರನ್‌ಗಳನ್ನು ಸುಲಭವಾಗಿ ತಲುಪಿದರು,(ಏಜೆನ್ಸೀಸ್).