ಹೂರ್ (ಸ್ವೀಡನ್): ಬೆಂಗಳೂರಿನ ಯುವ ಗಾಲ್ಫ್ ಆಟಗಾರ್ತಿ ಅವನಿ ಪ್ರಶಾಂತ್ ಹಾಲಿ ವರ್ಷ ಯುರೋಪ್ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಭಾರತೀಯರೆನಿಸಿದ್ದಾರೆ. ಆಶ್ಸೆಲ್ ಫೈನಲ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 16 ವರ್ಷದ ಅವನಿ ಈ ಸಾಧನೆ ಮಾಡಿದ್ದಾರೆ. ಇದು ಲೇಡೀಸ್ ಯುರೋಪಿಯನ್ ಟೂರ್ ಆಕ್ಸೆಸ್ ಸಿರೀಸ್ (ಎಲ್ಇಟಿಎಎಸ್) ಟೂರ್ನಿಯಾಗಿದೆ.
ಈ ಮುನ್ನ ಮಹಿಳಾ ಯುರೋಪಿಯನ್ ಟೂರ್ನಲ್ಲಿ ರಾಜ್ಯದವರೇ ಆದ ಅದಿತಿ ಅಶೋಕ್ ಮತ್ತು ದೀಕ್ಷಾ ದಗಾರ್ ಕೂಡ ಪ್ರಶಸ್ತಿ ಗೆದ್ದಿದ್ದರು.
'ಈ ಗೆಲುವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ನನ್ನ ಮೊದಲ ವೃತ್ತಿಪರ ಪ್ರಶಸ್ತಿ ಗೆಲುವಾಗಿದೆ' ಎಂದು ಅವನಿ ಸಂಭ್ರಮಿಸಿದ್ದಾರೆ. ಅವನಿ ಮುಂಬರುವ ಏಷ್ಯನ್ ಗೇಮ್ಸ್ನಲ್ಲೂ ಸ್ಪರ್ಧಿಸಲಿದ್ದು, ಭಾರತ ತಂಡದ ಅತ್ಯಂತ ಕಿರಿಯ ಕ್ರೀಡಾಪಟು ಎನಿಸಿದ್ದಾರೆ.