ಕ್ರೀಡೆ

ಅರ್ಜೆಂಟೀನಾ ವಿರುದ್ಧ ಜಯ ದಾಖಲಿಸಿದ ಸೌದಿ ತಂಡಕ್ಕೆ ಸಿಗಲಿದೆ ರೋಲ್ಸ್​ ರಾಯ್​​; ವಿಶೇಷ ಬಹುಮಾನ ಘೋಷಿಸಿದ ಸೌದಿ ದೊರೆ

ನವದೆಹಲಿ: ಫಿಫಾ ವಿಶ್ವಕಪ್​ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡದ ವಿರುದ್ಧ 2.1 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದ ಸೌದಿ ಅರೇಬಿಯಾ ತಂಡಕ್ಕೆ ಇದೀಗ ವಿಶೇಷ ಮತ್ತು ಸ್ಮರಣೀಯ ಬಹುಮಾನವೊಂದು ಘೋಷಣೆಯಾಗಿದೆ. ದುಬಾರಿ ಬೆಲೆಯ ಬಹುಮಾನ ಘೋಷಣೆ ಮಾಡಿರುವುದು ಸೌದಿ ದೊರೆ ಮೊಹಮ್ಮದ್ ಬಿನ್ ಸಲಾಮ್ ಅಲ್ ಸೌದ್​.

ಸೌದಿ ಅರೇಬಿಯಾದ ದೊರೆ, ತನ್ನ ತಂಡದ ಎಲ್ಲಾ ಆಟಗಾರರಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಸೌದಿ ದೊರೆ ನೀಡಲಿರುವ ರೋಲ್ಸ್​ ರಾಯ್ ಕಾರಿನ ಭಾರತೀಯ ಬೆಲೆ 8 ಕೋಟಿ ರೂ. ನಿಂದ ಆರಂಭವಾಗುತ್ತದೆ. ಇಷ್ಟು ದುಬಾರಿ ಬೆಲೆಯ ಉಡುಗೊರೆ ಇದೀಗ ಸೌದಿ ಅರೇಬಿಯಾ ಫುಲ್​ಬಾಲ್ ತಂಡದ ಸದಸ್ಯರದ್ದಾಗಲಿದೆ.

ಸೌದಿ ಅರೇಬಿಯಾ ತಂಡ ಅಜೆಂಟೀನಾ ತಂಡವನ್ನು ಸೋಲಿಸುತ್ತಿದ್ದಂತೆ, ಸೌದಿ ಅರೇಬಿಯಾಕ್ಕೆ ಒಂದು ದಿನ ರಜೆ ಘೋಷಿಸಲಾಗಿತ್ತು. ಸೌದಿಯ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯ, ಈ ಗೆಲುವನ್ನು ಸಂಭ್ರಮಿಸಲೆಂದು ಸೌದಿ ದೊರೆ ಒಂದು ದಿನದ ಸಾರ್ವತ್ರಿಕ ರಜೆ ಸಾರಿದ್ದರು. (ಏಜೆನ್ಸೀಸ್)