ಕ್ರೀಡೆ

VIDEO | ಧೋನಿ ವಿಡಿಯೋ ಹಂಚಿಕೊಂಡ ಸಾರಾ; ಬರೆದ ಸಾಲುಗಳಿವು

ಮೋಹನ್​ ಶೆಟ್ಟಿ

ಮುಂಬೈ: ಭಾನುವಾರ (ನ.19) ಅಹಮದಾಬಾದ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಫೈನಲ್​ ಹಣಾಹಣಿಯಲ್ಲಿ ಟೀಮ್ ಇಂಡಿಯಾವನ್ನು ಮಣಿಸಿದ ಕಾಂಗರೂ ಪಡೆ ಭರ್ಜರಿ ಜಯ ಗಳಿಸುವ ಮೂಲಕ ಐಸಿಸಿ ವಿಶ್ವಕಪ್​ 2023ರ ಪಟ್ಟವನ್ನು ಅಲಂಕರಿಸಿತು.

ಸತತ ಗೆಲುವು ಹಾಗೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಂತಿಮ ಘಟಕ್ಕೆ ಬಂದು ತಲುಪಿದ್ದ ಭಾರತ ಫೈನಲ್​ನಲ್ಲಿ ಉತ್ತಮ ಪೈಪೋಟಿ ಕೊಟ್ಟು ಸೋಲನ್ನು ಕಂಡಿದ್ದು, ಭಾರತೀಯರಿಗೆ ಹೆಮ್ಮೆ ತಂದಿದೆ. ಇದೀಗ ಮ್ಯಾಚ್​ ಮುಗಿದ ಬಳಿಕ ಸಾರಾ ತೆಂಡೂಲ್ಕರ್​ ಹಾಕಿದ ಪೋಸ್ಟ್​ವೊಂದು ನೆಟ್ಟಿಗರಿಗೆ 2011ರ ವಿಶ್ವಕಪ್​ ಗೆಲುವನ್ನು ನೆನಪಿಸಿದೆ.

ಏಕದಿನ ವಿಶ್ವಕಪ್ ಆರಂಭಗೊಂಡ ಮೊದಲ ದಿನದಿಂದಲೂ ಪ್ರತಿ ಪಂದ್ಯ ವೀಕ್ಷಣೆಗೆ ಹಾಜರಾಗುತ್ತಿದ್ದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಪುತ್ರಿ ಸಾರಾ ತೆಂಡೂಲ್ಕರ್​, ಟೀಮ್​ ಇಂಡಿಯಾಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಸ್ಟಾಂಡ್ಸ್​ನಲ್ಲಿ ಕುಳಿತು ಭಾರತಕ್ಕೆ ಪ್ರೋತ್ಸಾಹಿಸುತ್ತಿದ್ದ ಸಾರಾಗೆ ಕ್ರಿಕೆಟ್​ ಅಭಿಮಾನಿಗಳು ಗಿಲ್​ ಹೆಸರೇಳುವ ಮೂಲಕ ತಮಾಷೆ ಮಾಡುತ್ತಿದ್ದರು.

ಭಾರತ ತಂಡ ಪಂದ್ಯ ಗೆದ್ದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್​ ಅಭಿಮಾನಿಗಳು ಗೆಲುವನ್ನು ಸಂಭ್ರಮಿಸುವುದರ ಜತೆಗೆ ಸ್ಟೇಡಿಯಂನಲ್ಲಿ ಸಾರಾ ಕಂಗೊಳಿಸುವ ವಿಡಿಯೋವನ್ನು ಕೂಡ ಹಂಚಿಕೊಳ್ಳುವ ಮುಖೇನ ವ್ಯಾಪಕವಾಗಿ ವೈರಲ್ ಮಾಡುತ್ತಿದ್ದರು. ಈ ಮೂಲಕ ಸುದ್ದಿಯಲ್ಲಿದ್ದ ಸಾರಾ ಇದೀಗ ಮತ್ತೊಂದು ವಿಡಿಯೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಭಾನುವಾರದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನ್ನು ಕಂಡ ಬಳಿಕ 2011ರ ಫೈನಲ್​ ವಿಶ್ವಕಪ್​ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ ಹೊಡೆದ ಗೆಲುವಿನ ಸಿಕ್ಸರ್​ ವಿಡಿಯೋವನ್ನು ಹಂಚಿಕೊಂಡ ಸಾರಾ, "ಈ ವರ್ಲ್ಟ್​​​ ಕಪ್​ ಕೊಟ್ಟಿದ್ದಕ್ಕಾಗಿ ಥಾಂಕ್ಯೂ ಧೋನಿ" ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಸದ್ಯ ಈ ಒಂದು ಟ್ವೀಟ್ ಇದೀಗ​ ಅನೇಕರ ಗಮನವನ್ನು ಸೆಳೆದಿದ್ದು, 2011ರ ಶ್ರೀಲಂಕಾ ವಿರುದ್ಧದ ಅಂತಿಮ ಮ್ಯಾಚ್​ನ ಕ್ಷಣಗಳನ್ನು ಒಮ್ಮೆ ಮೆಲುಕು ಹಾಕಿ ಸಂಭ್ರಮಿಸುವಂತೆ ಮಾಡಿದೆ.