Sara Tendulkar : ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥದ ಸುದ್ದಿ ಹೊರಬಿದ್ದ ಕೆಲವೇ ದಿನಗಳಲ್ಲಿ ಈ ಸುದ್ದಿ ಕೂಡ ಹೊರಬಿದ್ದಿದೆ. ಆದರೆ, ವರ ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ನಿಶ್ಚಿತಾರ್ಥ ಸುದ್ದಿ ಹೊರ ಬೀಳುವ ಮುನ್ನ ಸಾರಾ ಅವರು ಯುವಕನೊಂದಿಗೆ ರಜಾದಿನ ಆಚರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಚಿತ್ರಗಳನ್ನು ಗೋವಾ ಪ್ರವಾಸದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. ಫೋಟೋಗಳು ಹೊರಬಂದ ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥದ ಸುದ್ದಿಯೂ ಹೊರಬಂದಿದೆ. ಆದಾಗ್ಯೂ, ಚಿತ್ರದಲ್ಲಿನ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಮಧ್ಯೆ, ಚಿತ್ರದಲ್ಲಿರುವ ಯುವಕನ ಬಗ್ಗೆ ಮಾಹಿತಿ ಹೊರಬಿದ್ದಿದೆ. ಆ ಯುವಕ ಸಿದ್ಧಾರ್ಥ್ ಕೆರ್ಕರ್. ಆತ ಗೋವಾ ಮೂಲದ ಕಲಾವಿದ ಮತ್ತು ರೆಸ್ಟೋರೆಂಟ್ ಮಾಲೀಕ. ಆತನಿಗೆ ಸಚಿನ್ ಕುಟುಂಬದೊಂದಿಗೆ ನಿಕಟ ಸಂಬಂಧವಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಸಿದ್ಧಾರ್ಥ್ ಈ ಹಿಂದೆ ಸಾರಾ ಜೊತೆ ಕಾಣಿಸಿಕೊಂಡಿದ್ದರು. ಇದೀಗ ಆತನೊಂದಿಗೆ ಸಾರಾ ಇರುವ ಫೋಟೋಗಳು ವೈರಲ್ ಆಗಿದ್ದು, ನಿಶ್ಚಿತಾರ್ಥದ ಸುದ್ದಿಯೂ ಹೊರಬಿದ್ದಿದೆ.
ಸಾರಾ ಅವರ ಪ್ರೇಮ ಜೀವನದ ಬಗ್ಗೆ ಸ್ವಲ್ಪ ಸಮಯದಿಂದ ಊಹಾಪೋಹಗಳು ಹರಿದಾಡುತ್ತಿವೆ. ಸಾರಾ ಅವರು ಭಾರತೀಯ ಟೆಸ್ಟ್ ನಾಯಕ ಶುಭಮಾನ್ ಗಿಲ್ ಮತ್ತು ನಟ ಸಿದ್ಧಾರ್ಥ್ ಚತುರ್ವೇದಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಈ ಹಿಂದೆ ಹಬ್ಬಿದ್ದವು. ಅಲ್ಲದೆ, ಆಗಾಗ ಶುಭಮಾನ್ ಗಿಲ್ ಜೊತೆಗೆ ಸಾರಾ ಹೆಸರು ಕೇಳಿಬರುತ್ತಲೇ ಇರುತ್ತದೆ.
ಅಂದಹಾಗೆ, ಸಚಿನ್ ತೆಂಡೂಲ್ಕರ್ ಫೌಂಡೇಶನ್‌ನ ನಿರ್ದೇಶಕಿಯಾಗಿರುವ ಸಾರಾ, ಬಯೋಮೆಡಿಕಲ್ ವಿಜ್ಞಾನಿ ಮತ್ತು ಪೌಷ್ಟಿಕತಜ್ಞೆಯೂ ಹೌದು. ಸಾರಾ ಇತ್ತೀಚೆಗೆ ತಮ್ಮ ಹೊಸ ಉದ್ಯಮವಾದ ಪೈಲೇಟ್ಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅನ್ನೋದು ಕೇವಲ ಊಹಾಪೋಹವಷ್ಟೇ, ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇನ್ನು ಪ್ರಮುಖ ಕೈಗಾರಿಕೋದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್ ಜೊತೆ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡರು. ಸಾನಿಯಾ, ಮುಂಬೈ ಮೂಲದ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ ಮತ್ತು ಸ್ಟೋರ್ ಎಲ್‌ಎಲ್‌ಪಿಯ ನಿರ್ದೇಶಕಿ. ಇಬ್ಬರು ನಿಶ್ಚಿತಾರ್ಥವು ಬಹಳ ಖಾಸಗಿ ಸಮಾರಂಭದಲ್ಲಿ ನಡೆಯಿತು. (ಏಜೆನ್ಸೀಸ್)