ಕ್ರೀಡೆ

ತಾಯಿ ಹುಟ್ಟುಹಬ್ಬ ಆಚರಿಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್

ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ತಾಯಿ ರಜನಿ ತೆಂಡುಲ್ಕರ್ ಅವರ 83ನೇ ವರ್ಷದ ಹುಟ್ಟುಹಬ್ಬ ಆಚರಿಸಿದರು. ತಾಯಿಗೆ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ದಿಗ್ಗಜ ಪ್ರಕಟಿಸಿದ್ದಾರೆ. ಕೋವಿಡ್-19 ರಿಂದಾಗಿ ಕುಟುಂಬದ ಇತರ ಸದಸ್ಯರು ಸಂಭ್ರಮದಲ್ಲಿ ಭಾಗಿಯಾಗಿಲ್ಲ. ಬದಲಿಗೆ ವರ್ಚುವಲ್ ವಿಡಿಯೋ ಕಾಲ್ ಮೂಲಕ ಕೇಕ್ ಕತ್ತರಿಸುವುದನ್ನು ನೋಡಿಕೊಂಡಿದ್ದಾರೆ. ತುಂಬಾ ಸಂತೋಷದ ಸಂಜೆಯಾಗಿತ್ತು. ಅಮ್ಮನ 83ನೇ ಹುಟ್ಟುಹಬ್ಬ ಆಚರಿಸಲಾಯಿತು. ಸಹೋದರು ಹಾಗೂ ಸಹೋದರಿಯರು ವಿಡಿಯೋ ಕಾಲ್ ಮೂಲಕ ನಮ್ಮನ್ನು ಸೇರಿಕೊಂಡಿದ್ದರು ಎಂದು ಸಚಿನ್ ಬರೆದುಕೊಂಡಿದ್ದಾರೆ.

ಸಚಿನ್ ಅವರ ಆಪ್ತಮಿತ್ರರಲ್ಲಿ ಒಬ್ಬರಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಹಾಲಿ-ಮಾಜಿ ಕ್ರಿಕೆಟಿಗರು ಶುಭಾಯಶ ತಿಳಿಸಿದ್ದಾರೆ. ಜತೆಗೆ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ತಂಡದಿಂದಲೂ ಶುಭಕೋರಲಾಗಿದೆ. ಕಳೆದ ಏಪ್ರಿಲ್ 24 ರಂದು 47ನೇ ವರ್ಷಕ್ಕೆ ಕಾಲಿಟ್ಟ ತೆಂಡುಲ್ಕರ್‌ಗೆ ತಾಯಿ ರಜನಿ, ಗಣೇಶ ವಿಗ್ರಹ ನೀಡಿದ್ದರು. ಜತೆಗೆ ಅಮ್ಮಂದಿರ ದಿನಾಚರಣೆಯ ದಿನದಂದು ತಾಯಿ ಜತೆಗಿರುವ ಫೋಟೋವನ್ನು ಸಚಿನ್ ಪ್ರಕಟಿಸಿದ್ದರು.