ಮುಂಬೈ: ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್ ತಂಡದ ಪರ ಪದಾರ್ಪಣೆ ಮಾಡಿ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡು ದ್ವಿಶತಕಗಳನ್ನು ಒಳಗೊಂಡಂತೆ 700ಕ್ಕೂ ಹೆಚ್ಚು ರನ್ ಬಾರಿಸಿ ಅಬ್ಬರಿಸಿದ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ಯುರೋಪ್‌ನಲ್ಲಿ ತಮ್ಮ ಮತ್ತೊಂದು ಇನ್ನಿಂಗ್ ಆನಂದಿಸುತ್ತಿದ್ದಾರೆ. ಪ್ಯಾರಿಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ಕೌಂಟಿ ಕ್ರಿಕೆಟ್ ನಲ್ಲಿನ ಅವರ ಯಶಸ್ವಿ ಪ್ರದರ್ಶನವು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ಟೆಸ್ಟ್ ತಂಡದಲ್ಲಿ ಕಮ್ ಬ್ಯಾಕ್ ಆಗಲು ಕಾರಣವಾಯಿತು. ಸಸೆಕ್ಸ್ ಕೌಂಟಿ ಕ್ಲಬ್ ಪರ ಆಡುತ್ತಿರುವ ಪೂಜಾರ ನಾಲ್ಕು ಪಂದ್ಯಗಳಲ್ಲಿ ಎರಡು ಶತಕ ಹಾಗೂ ಎರಡು ದ್ವಿಶತಕ ಸಿಡಿಸಿದ್ದರು. ಕೌಂಟಿ ಚಾಂಪಿಯನ್ಷಿಪ್ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಕೌಂಟಿ ಕ್ರಿಕೆಟ್ ಮುಗಿದ ನಂತರ, ಪೂಜಾರ ಈ ದಿನಗಳಲ್ಲಿ ತನ್ನ ಪತ್ನಿ ಪೂಜಾ ಮತ್ತು ಮಗಳು ಅದಿತಿಯೊಂದಿಗೆ ಪ್ಯಾರಿಸ್‌ನಲ್ಲಿ ರಜೆ ದಿನಗಳನ್ನು ಕಳೆಯುತ್ತಿದ್ದಾರೆ. ಚೇತೇಶ್ವರ ಪೂಜಾರ ಅವರು ತಮ್ಮ ಕುಟುಂಬದೊಂದಿಗೆ ಕೇಳಯುತ್ತಿರುವ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾದ ಕೂ ಆಪ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವುದು ಚೇತೇಶ್ವರ ಪೂಜಾರ ಅವರಿಗೆ ವರದಾನವಾಗಿದೆ. ಒಂದೆಡೆ ಐಪಿಎಲ್ 2022 ಭಾರತದಲ್ಲಿ ನಡೆಯುತ್ತಿದ್ದರೆ, ಮತ್ತೊಂದೆಡೆ ಚೇತೇಶ್ವರ ಪೂಜಾರ ಸಸೆಕ್ಸ್ ಪರ ರನ್ ಗಳಿಸುವುದರಲ್ಲಿ ನಿರತರಾಗಿದ್ದರು. ಚೇತೇಶ್ವರ್ ಅವರ ಅತ್ಯಂತ ಯಶಸ್ವಿ ಕೌಂಟಿ ಕ್ರಿಕೆಟ್ ಜುಲೈನಲ್ಲಿನ ಬರ್ಮಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಏಕೈಕ ಐದನೇ ಪಂದ್ಯಕ್ಕಾಗಿ ಭಾರತೀಯ ಟೆಸ್ಟ್ ತಂಡಕ್ಕೆ ಮರಳಲು ಸಹಾಯ ಮಾಡಿದೆ.
ಇಂಗ್ಲೆಂಡ್‌ಗೆ ತೆರಳುವ ಮೊದಲು, ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ತವರು ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಅವರನ್ನು ಭಾರತೀಯ ಟೆಸ್ಟ್ ತಂಡದಿಂದ ಹೊರಗಿಡಲಾಗಿತ್ತು. ಶ್ರೇಯಸ್ ಅಯ್ಯರ್ ನಂತರ ಯುವ ಆಟಗಾರರಿಗೆ ಅವಕಾಶ ನೀಡಲು ಆಯ್ಕೆ ಸಮಿತಿ ನಿರ್ಧರಿಸಿತ್ತು.