IPL: ಐಪಿಎಲ್ 18ನೇ ಆವೃತ್ತಿ ಅತ್ಯಂತ ರೋಚಕತೆಗೆ ತಿರುಗಿದ್ದು, ಬಹುತೇಕ ಪಂದ್ಯಗಳು ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಈ ಮಧ್ಯೆ ಸತತ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ 9 ವರ್ಷಗಳ ಬಳಿಕ ಐಪಿಎಲ್ ಫೈನಲ್ಗೆ ಲಗ್ಗೆಯಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ತನ್ನ ಚೊಚ್ಚಲ ಟ್ರೋಫಿ ಎತ್ತಿಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಸದ್ಯ ಇದೇ ಹಲವರ ಆಶಯವೂ ಆಗಿದೆ.
ಇದನ್ನೂ ಓದಿ: ಆ ಒಂದು ಘಟನೆಯಿಂದ ಈ ನಟ ಕಪ್ಪು ಬಟ್ಟೆ ಹಾಕೋದನ್ನೇ ಬಿಟ್ರು! ಕೋರ್ಟ್ ಕೂಡ ನಿಷೇಧ ಹೇರಿತ್ತು | Black Dress
ಇಂದು (ಜೂ.01) ಐಪಿಎಲ್ 18ನೇ ಆವೃತ್ತಿಯ ಕ್ವಾಲಿಫೈಯರ್-2 ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದ್ದು, ಗೆದ್ದ ತಂಡ ಫೈನಲ್ನಲ್ಲಿ ಆರ್ಸಿಬಿ ಎದುರು ಕಪ್ಗಾಗಿ ಸೆಣಸಲಿದೆ. ಸೋತ ತಂಡ ಲೀಗ್ನಿಂದ ಹೊರಬೀಳಲಿದೆ. ಇನ್ನು ಇದು ಒಂದೆಡೆಯಾದರೆ, ಮತ್ತೊಂದೆಡೆ ಇದೇ ದಿನದಂದು (ಜೂನ್ 01) ಐಪಿಎಲ್ ಉದ್ಘಾಟನಾ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ, ಶೇನ್ ವಾರ್ನ್ ನಾಯಕತ್ವದಲ್ಲಿ ತಮ್ಮ ಚೊಚ್ಚಲ ಹಾಗೂ ಮೊದಲ ಆವೃತ್ತಿಯ ಟ್ರೋಫಿಯನ್ನು ಎತ್ತಿಹಿಡಿಯಿತು.
ಆ ನಂತರ ಇದೇ ದಿನ 2014ರಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದು ಬೀಗಿತ್ತು. ಈ ಎರಡೂ ಫ್ರಾಂಚೈಸಿಗಳು ಲೀಗ್ ಇತಿಹಾಸದಲ್ಲಿ ತಮ್ಮ ಅತ್ಯುತ್ತಮ ಕ್ಷಣಗಳ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿವೆ. 2008ರಲ್ಲಿ ಆರ್ಆರ್ಗೆ ಶೇನ್ ವಾರ್ನ್ ಕ್ಯಾಪ್ಟನ್ ಆಗಿದ್ದರೆ, 2014ರಲ್ಲಿ ಕೆಕೆಆರ್ಗೆ ಗೌತಮ್ ಗಂಭೀರ್ ನಾಯಕನಾಗಿದ್ದರು. ಈ ಇಬ್ಬರು ತಮ್ಮ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ಸಂಭ್ರಮದ ದಿನವಿದು ಎಂಬುದು ಐಪಿಎಲ್ ಪ್ರಿಯರಿಗೆ ಸಂತಸದ ಸಂಗತಿ. (ಏಜೆನ್ಸೀಸ್).