Rohit Sharma: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ರೋಹಿತ್ ಶರ್ಮ ಪಡೆ, ತಮ್ಮ ನಾಲ್ಕನೇ ಪಂದ್ಯವನ್ನು ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯವೂ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಿಚ್ ಕಂಡೀಷನ್ ಹೇಗಿರಲಿದೆ? ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಆದ್ರೆ, ಇದನ್ನೂ ಮೀರಿಸುವ ವಿಷಯವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಬರೀ ನೆಲದ ಮೇಲೆ ಮಲಗುವುದು ನಿಜವಾಗಿಯೂ ಅಪಾಯಕಾರಿಯೇ? ಇಲ್ಲಿದೆ ನೋಡಿ ಅಸಲಿ ಸಂಗತಿ! Sleeping On The Floor
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭದ ಮೊದಲ ಪಂದ್ಯದಿಂದ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದವರೆಗೂ ಟೀಮ್ ಇಂಡಿಯಾ ದುಬೈನಲ್ಲಿ ವಾಸ್ತವ್ಯ ಹೂಡಿದೆ. ತಮ್ಮೆಲ್ಲ ಪಂದ್ಯಗಳನ್ನು ದುಬೈ ಕ್ರೀಡಾಂಗಣದಲ್ಲಿಯೇ ಆಡುತ್ತಿರುವ ರೋಹಿತ್ ಶರ್ಮ ಪಡೆ, ಇದೇ ಕಾರಣಕ್ಕಾಗಿ ಬ್ಯಾಕ್ ಟು ಬ್ಯಾಕ್ ಗೆಲುವನ್ನು ದಾಖಲಿಸುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ದುಬೈ ಪಿಚ್ ಹೇಗಿದೆ? ಅಲ್ಲಿನ ಪ್ರತಿಯೊಂದು ಸೂಕ್ಷ್ಮತೆಗಳನ್ನು ಅರಿತಿರುವ ಟೀಮ್ ಇಂಡಿಯಾ, ಅದರ ಅನುಗುಣವಾಗಿ ಎದುರಾಳಿಗಳ ವಿರುದ್ಧ ಪ್ರತಿ ಪಂದ್ಯದಲ್ಲಿ ಸುಲಭವಾಗಿ ಜಯ ಸಾಧಿಸುತ್ತಿದೆ ಎಂದು ಟೀಕಾಕಾರರು ಸಾಲು ಸಾಲು ಆರೋಪಗಳನ್ನು ಎಸಗಿದ್ದಾರೆ.
ಕಡೆಗೂ ಟೀಕಾಕಾರರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಹಿಟ್ಮ್ಯಾನ್, "ನಾವು ಇಲ್ಲಿಯವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ, ಪಿಚ್‌ಗಳು ಒಂದೇ ರೀತಿ ಕಂಡಿದ್ದೇ ಆದರೂ ವಿಭಿನ್ನವಾಗಿರುವುದು ಸ್ಪಷ್ಟ. ಪ್ರತಿ ಬಾರಿಯೂ ಪಿಚ್ನಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ. ಸೆಮಿಫೈನಲ್‌ಗೆ ಸಂಬಂಧಿಸಿದಂತೆ, ಯಾವ ರೀತಿ ಪ್ಲ್ಯಾನ್ ಮಾಡಬೇಕೆಂಬುದು ನಮಗೆ ತಿಳಿದಿಲ್ಲ. ಆದರೆ ಪರಿಸ್ಥಿತಿಗಳು ಏನೇ ಇರಲಿ, ನಮ್ಮ ವಿಧಾನ ಮಾತ್ರ ಒಂದೇ ಆಗಿರುತ್ತದೆ" ಎಂದರು.
"ನಾವು ಪರಿಸ್ಥಿತಿಗೆ ತಕ್ಕಂತೆ ಆಡಬೇಕು. ಅದಕ್ಕೆ ಅನುಗುಣವಾಗಿ ಹೊಂದಿಕೊಳ್ಳಬೇಕು. ಇದು ನಮ್ಮ ತವರಿನ ಮೈದಾನವಲ್ಲ. ಇದು ದುಬೈ. ನಮ್ಮ ತಂಡ ಇಲ್ಲಿ ಹೆಚ್ಚಾಗಿ ಆಡುವುದಿಲ್ಲ. ಆದ್ದರಿಂದ, ನಮಗೂ ಇದು ಹೊಸತು" ಎಂದು ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).