Rohit Sharma: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿ ಮುಕ್ತಾಯಗೊಂಡ ನಂತರ ಜೂನ್ನಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ. ಈ ಟೂರ್ನಿಗೆ ಟೀಮ್ ಇಂಡಿಯಾ ತಂಡ ಸಜ್ಜಾಗುತ್ತಿದ್ದು, ಯಾರಿಗೆ ತಂಡದಲ್ಲಿ ಸ್ಥಾನ ಕೊಡಬೇಕು? ಯಾರನ್ನು ಕೈಬಿಡಬೇಕು ಎಂಬುದನ್ನು ಮ್ಯಾನೇಜ್ಮೆಂಟ್ ಈಗಾಗಲೇ ನಿರ್ಧರಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮ, ನಾಯಕನಾಗಿಯೂ ತಂಡಕ್ಕೆ ಉತ್ತಮ ಕೊಡುಗೆ ನೀಡಲಿಲ್ಲ. ಇದು ಅವರ ಟೆಸ್ಟ್ ಭವಿಷ್ಯದ ಮೇಲೆ ತೀರ ಪ್ರಭಾವ ಬೀರಿತ್ತು. ಕೆಲವರು ಇಲ್ಲಿಗೆ ರೋಹಿತ್ ಟೆಸ್ಟ್ ಕ್ರಿಕೆಟ್ ಮುಗಿಯಿತು. ಶೀಘ್ರವೇ ತಮ್ಮ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗೆ ಅವರು ನಿವೃತ್ತಿ ಘೋಷಿಸಲಿದ್ದಾರೆ ಎಂದಿದ್ದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹಿಟ್ಮ್ಯಾನ್, ವದಂತಿಗಳಿಗೆ ತಿರುಗೇಟು ನೀಡಿ, ಎಂದಿನಂತೆ ತಮ್ಮ ಆಟದತ್ತ ಗಮನಹರಿಸಿದ್ದಾರೆ.
ಇತ್ತೀಚಿನ ವರದಿ ಅನುಸಾರ, ಮುಂಬರುವ ಜೂನ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ರೋಹಿತ್ ಶರ್ಮ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ. ರೋಹಿತ್ ಶರ್ಮ ತಂಡದಲ್ಲಿ ಆಡುವುದು ಬಹುತೇಕ ಅನುಮಾನ ಎನ್ನಲಾಗಿದ್ದು, ಮಾಜಿ ನಾಯಕ, 'ರನ್ಮಷಿನ್' ವಿರಾಟ್ ಕೊಹ್ಲಿ ತಮ್ಮ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).