ಕ್ರೀಡೆ

ಈ ತಪ್ಪು ಮಾಡಬಾರದಿತ್ತು ಟೀಮ್ ಇಂಡಿಯಾ! ಕ್ಯಾಪ್ಟನ್​ ರೋಹಿತ್ ಶರ್ಮ ನಿರ್ಧಾರವನ್ನು ಪ್ರಶ್ನಿಸಿದ ಮಾಜಿ ಕ್ರಿಕೆಟಿಗ | Rohit Sharma

ನವದೆಹಲಿ: ಪ್ರಸಕ್ತ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳನ್ನು ಆಡಿರುವ ಭಾರತ, 1-1 ಅಂತರದಲ್ಲಿ ಸಮಬಲವನ್ನು ಕಾಯ್ದುಕೊಂಡಿದೆ. ಇನ್ನು ಮೂರನೇ ಟೆಸ್ಟ್​ ​ ಪಂದ್ಯ ಗಬ್ಬಾ ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದು, ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ (Rohit Sharma) ತೆಗೆದುಕೊಂಡ ನಿರ್ಧಾರ ಸರಿಯಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಬೌಲರ್​ ಬ್ರೆಟ್​ ಲೀ ಹೇಳಿದ್ದಾರೆ.

ಬೌಲಿಂಗ್ ಆಯ್ಕೆ ತಪ್ಪು

ದಿ ಗಬ್ಬಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮ, ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸುವ ಮೂಲಕ ತಮ್ಮ ತಂಡ ಗಬ್ಬಾ ಪಿಚ್​ನಲ್ಲಿ ಬೌಲಿಂಗ್ ಮಾಡುವಂತೆ ತಿಳಿಸಿದ್ದು ಏಕೆ ಎಂಬುದು ನನ್ನಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ. “ಭಾರತ ಈ ಟೆಸ್ಟ್‌ನಲ್ಲಿ ಮೊದಲು ಬೌಲಿಂಗ್ ಮಾಡುವ ಮೂಲಕ ತಪ್ಪು ಮಾಡಿದೆ ಎಂದು ನಾನು ಭಾವಿಸುವೆ. ಪಂದ್ಯ ಮುಂದುವರೆದಂತೆ ನೆಲವು ಗಟ್ಟಿಯಾಗುತ್ತದೆ ಮತ್ತು ಬ್ಯಾಟಿಂಗ್ ಕಷ್ಟವಾಗುತ್ತದೆ. ಉಳಿದ ಇನ್ನಿಂಗ್ಸ್‌ಗಳಲ್ಲಿ ಬ್ಯಾಟರ್‌ಗಳು ಹೆಣಗಾಡುವುದನ್ನು ನೋಡಬಹುದು ಮತ್ತು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಇಲ್ಲಿ ಅಷ್ಟು ಸುಲಭದ ಮಾತಲ್ಲ. ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳು ಪವರ್​ ಹಿಟ್ಟಿಂಗ್ ಮಾಡಲು ಪರದಾಡುತ್ತಿದ್ದಾರೆ" ಎಂದು ಬ್ರೆಟ್ ಲೀ ಹೇಳಿದ್ದಾರೆ.

ಬದಲಾವಣೆ

ದಿ ಗಬ್ಬಾ ಪಿಚ್​ನಲ್ಲಿ ಟೀಮ್ ಇಂಡಿಯಾ ಪ್ರದರ್ಶನದ ಮೇಲೆ ಭಾರೀ ನಿರೀಕ್ಷೆಗಳು ಮೂಡಿದೆ. ಇಂದು ಬೆಳಗ್ಗೆ ವರುಣನ ಅಡಚಣೆಯಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್​ ಸರಣಿಯ ಮೂರನೇ ಪಂದ್ಯದ ಮೊದಲ ದಿನದಾಟ ಸಂಪೂರ್ಣ ಮಳೆಗೆ ಆಹುತಿಯಾಗಿದೆ. 13.2 ಓವರ್​​ಗಳನ್ನು ಆಡಲು ಮಾತ್ರ ಅವಕಾಶ ಸಿಕ್ಕಿದ್ದು, ಮೊದಲು ಬ್ಯಾಟ್​ ಮಾಡಿದ ಕಾಂಗರೂ ಪಡೆ 28 ರನ್​ ಗಳಿಸಿ, ಪೆವಿಲಿಯನ್​ನತ್ತ ಓಡಿದೆ. 3ನೇ ಟೆಸ್ಟ್​ಗಾಗಿ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಹರ್ಷಿತ್ ರಾಣಾ ಬದಲಿಗೆ ರವೀಂದ್ರ ಜಡೇಜಾ ಮತ್ತು ಆಕಾಶ್ ದೀಪ್​ರನ್ನು ಕರೆದುಕೊಳ್ಳಲಾಗಿದೆ. ಇನ್ನು ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ ಬದಲಿಗೆ ಜೋಶ್ ಹೇಜಲ್‌ವುಡ್ ಎಂಟ್ರಿ ಕೊಟ್ಟಿದ್ದಾರೆ,(ಏಜೆನ್ಸೀಸ್).