ಕ್ರೀಡೆ

3ನೇ ಏಕದಿನ, 33ನೇ ಶತಕ: ಐತಿಹಾಸಿಕ ದಾಖಲೆ ಬರೆದ ರೋಹಿತ್ ಶರ್ಮ, ಸೆಂಚುರಿ ಸ್ಟಾರ್​ಗೆ ಫ್ಯಾನ್ಸ್ ಸಲಾಂ | Rohit Sharma

Rohit Sharma: ಇಂದು (ಅ.25) ಸಿಡ್ನಿಯಲ್ಲಿ ನಡೆದ ಆತಿಥೇಯ ಆಸೀಸ್ (IND vs AUS)​ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ‘ರೋಕೊ’ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 9 ವಿಕೆಟ್​ಗಳ ಅಂತರದಲ್ಲಿ ಭಾರತ ಪಂದ್ಯ ಗೆದ್ದಿತು. ಈ ಮೂಲಕ ಏಕದಿನ ಸರಣಿಯಲ್ಲಿ ಕ್ಲೀನ್​ ಸ್ವೀಪ್​ನಿಂದ ಬಚಾವ್ ಆಯಿತು. ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ ರೋಹಿತ್ ಶರ್ಮ, ಶತಕದಾಟದ (ಅಜೇಯ 121 ರನ್​) ಮೂಲಕ ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.

ಈ ಶತಕದ ಮೂಲಕ ಹಿಟ್‌ಮ್ಯಾನ್ ಏಕದಿನ ಕ್ರಿಕೆಟ್​ನಲ್ಲಿ ತಮ್ಮ 33ನೇ ಶತಕ ದಾಖಲಿಸಿದರು. ಏಕದಿನ ಪಂದ್ಯಗಳಲ್ಲಿ ಆಸೀಸ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹಿಟ್​ಮ್ಯಾನ್​, ಈ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಕುಮಾರ್ ಸಂಗಕ್ಕಾರ ನಂತರದಲ್ಲಿ ಸ್ಥಾನ ಪಡೆದಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಆಸೀಸ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರಿವರು

1. ರೋಹಿತ್ ಶರ್ಮ: 33 ಇನ್ನಿಂಗ್ಸ್‌, 6 ಶತಕ

2. ವಿರಾಟ್ ಕೊಹ್ಲಿ: 32 ಇನ್ನಿಂಗ್ಸ್‌, 5 ಶತಕ

3. ಕುಮಾರ್ ಸಂಗಕ್ಕಾರ (ಶ್ರೀಲಂಕಾ): 49 ಇನ್ನಿಂಗ್ಸ್‌, 5 ಶತಕ

50 ಅಂತರರಾಷ್ಟ್ರೀಯ ಶತಕಗಳು..

ಇಂದಿನ ಶತಕ ಸೇರಿದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್ ಅವರ 50ನೇ ಶತಕ ಇದಾಗಿದೆ. ರೋಹಿತ್ ಶರ್ಮಾ ಇದುವರೆಗೆ ಏಕದಿನ ಪಂದ್ಯಗಳಲ್ಲಿ 33, ಟೆಸ್ಟ್ ಪಂದ್ಯಗಳಲ್ಲಿ 12 ಮತ್ತು ಟಿ20 ಪಂದ್ಯಗಳಲ್ಲಿ 5 ಶತಕಗಳನ್ನು ಗಳಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.