Rohit Sharma: ನಿನ್ನೆ (ಮೇ.30) ನಡೆದ ಐಪಿಎಲ್ ಪ್ಲೇಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಜಿಟಿ ವಿರುದ್ಧ ಮುಂಬೈ ಇಂಡಿಯನ್ಸ್ 20 ರನ್ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಕ್ವಾಲಿಫೈಯರ್-2 ಪಂದ್ಯಕ್ಕೆ ಲಗ್ಗೆಯಿಟ್ಟಿರುವ ಹಾರ್ದಿಕ್ ಪಾಂಡ್ಯ ಪಡೆ, ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಲು ಎದುರುನೋಡುತ್ತಿದೆ. ಜಿಟಿ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮ, ಇದೀಗ 2 ವಿಶೇಷ ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸೇರಲು ಬಿಜೆಪಿ, ಜೆಡಿಎಸ್ ಶಾಸಕರ ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ, ಡಿಕೆಶಿ ಓಕೆ ಎಂದರೆ ಸಾಕು
ನಿರ್ಣಾಯಕ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ (81 ರನ್, 50 ಎಸೆತ) ಐಪಿಎಲ್‌ನಲ್ಲಿ 300 ಸಿಕ್ಸರ್ ಸೇರಿದಂತೆ 7000 ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಈ ಇನ್ನಿಂಗ್ಸ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆ ಹರಿಸಿದ ರೋಹಿತ್, ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಮತ್ತು ಒಟ್ಟಾರೆಯಾಗಿ ಎರಡನೇ ಆಟಗಾರನಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಈ ಇನ್ನಿಂಗ್ಸ್‌ನಲ್ಲಿ 8 ರನ್ನಿಂದ 7000 ರನ್‌ಗಳನ್ನು ಪೂರ್ಣಗೊಳಿಸಿದ ರೋಹಿತ್, ವಿರಾಟ್ ಕೊಹ್ಲಿ ಬಳಿಕ ಐಪಿಎಲ್‌ನಲ್ಲಿ ಈ ದಾಖಲೆಯನ್ನು ತಲುಪಿದ ಎರಡನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಥಗ್ ಲೈಫ್ ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ಲಿಪ್ಲಾಕ್: ಅಚ್ಚರಿ ಹೇಳಿಕೆ ನೀಡಿದ ನಟಿ ಅಭಿರಾಮಿ! Kamal Haasan
1. ಕ್ರಿಸ್ ಗೇಲ್-357
2. ರೋಹಿತ್ ಶರ್ಮಾ-300
3. ವಿರಾಟ್ ಕೊಹ್ಲಿ-291
4. ಎಂ.ಎಸ್. ಧೋನಿ-264
5. ಎಬಿ ಡಿವಿಲಿಯರ್ಸ್-251
1. ವಿರಾಟ್ ಕೊಹ್ಲಿ-8618
2. ರೋಹಿತ್ ಶರ್ಮಾ-7000
3. ಶಿಖರ್ ಧವನ್-6769
4. ಡೇವಿಡ್ ವಾರ್ನರ್-6565
5. ಸುರೇಶ್ ರೈನಾ-5528