ಇಂಡಿಯನ್ ಪ್ರೀಮಿಯರ್ ಲೀಗ್(IPL)2025ರ 18ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರ ರೋಹಿತ್ ಶರ್ಮ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಹೌದು, ಐಪಿಎಲ್ನಲ್ಲಿ ಮುಂಬೈ ತಂಡದ ಪರ 6,000 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು (ಮೇ.1ರಂದು) ನಡೆದ ರಾಜಸ್ತಾನ ವಿರುದ್ಧ ನಡೆದ ಪಂದ್ಯಲ್ಲಿ ಈ ವಿಶೇಷ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ಮೊದಲ ಡೋಸ್ ಲಸಿಕೆ ಪಡೆದ ತೋಳಿಗೆ ಮತ್ತೊಂದು ಡೋಸ್ ಪಡೆಯವುದು ಉತ್ತಮವೇ?: ಹೊಸ ಅಧ್ಯಯನ ಹೇಳಿದ್ದೇನು? | Vaccine
2011ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಹಿಟ್‌ಮ್ಯಾನ್, ಫ್ರಾಂಚೈಸಿ ಪರ 231 ಪಂದ್ಯಗಳನ್ನು ಆಡಿದ್ದಾರೆ ಮತ್ತು 2 ಶತಕಗಳು ಮತ್ತು 38 ಅರ್ಧಶತಕಗಳ ಸಹಾಯದಿಂದ ಇದುವರೆಗೂ 6017 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್‌ಗೆ ಹತ್ತಿರವೂ ಯಾರೂ ಇಲ್ಲ. ರೋಹಿತ್ ನಂತರ, ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೀರನ್ ಪೊಲಾರ್ಡ್. ಮುಂಬೈ ಪರ 211 ಪಂದ್ಯಗಳಲ್ಲಿ 18 ಅರ್ಧಶತಕಗಳ ಸಹಾಯದಿಂದ 3915 ರನ್ ಗಳಿಸಿದ್ದಾರೆ. ಪೊಲಾರ್ಡ್ ನಂತರ, ಸೂರ್ಯಕುಮಾರ್ ಯಾದವ್ ಮುಂಬೈ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.
ಸೂರ್ಯಕುಮಾರ್ ಈ ಫ್ರಾಂಚೈಸಿ ಪರ 109 ಪಂದ್ಯಗಳಲ್ಲಿ 2 ಶತಕ ಮತ್ತು 26 ಅರ್ಧಶತಕಗಳೊಂದಿಗೆ 3460 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಸೂರ್ಯ ನಂತರ ಅಂಬಟಿ ರಾಯುಡು (2635) ಮತ್ತು ಸಚಿನ್ ತೆಂಡೂಲ್ಕರ್ (2599) ಇದ್ದಾರೆ. (ಏಜೆನ್ಸೀಸ್)