ಕೊಲಂಬೊ: ಮೊಹಮದ್ ಅಜರುದ್ದೀನ್ (1990-91, 1995) ಮತ್ತು ಎಂಎಸ್ ಧೋನಿ (2010, 2016) ಭಾರತಕ್ಕೆ ತಲಾ 2 ಬಾರಿ ಏಷ್ಯಾಕಪ್ ಗೆದ್ದುಕೊಟ್ಟಿರುವ ನಾಯಕರಾಗಿದ್ದಾರೆ. ಭಾನುವಾರ ಶ್ರೀಲಂಕಾ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ, ರೋಹಿತ್ ಶರ್ಮ ಆ ದಾಖಲೆ ಸರಿಗಟ್ಟುವ ಅವಕಾಶ ಹೊಂದಿದ್ದಾರೆ.
2018ರಲ್ಲಿ ರೋಹಿತ್ ಶರ್ಮ ಅವರ ಹಂಗಾಮಿ ಸಾರಥ್ಯದಲ್ಲೇ ಭಾರತ ತಂಡ ಪ್ರಶಸ್ತಿ ಗೆದ್ದಿತ್ತು. ಕಳೆದ ವರ್ಷ ಟಿ20 ಮಾದರಿಯ ಏಷ್ಯಾಕಪ್ನಲ್ಲೂ ಭಾರತ ರೋಹಿತ್ ಸಾರಥ್ಯದಲ್ಲೇ ಆಡಿದ್ದರೂ, ಪ್ರಶಸ್ತಿ ಸುತ್ತಿಗೇರಲು ಶಕ್ತವಾಗಿರಲಿಲ್ಲ.
ಫೈನಲ್ನಲ್ಲಿ ರೋಹಿತ್ ಶರ್ಮ 250 ಏಕದಿನ ಪಂದ್ಯ ಆಡಿದ 9ನೇ ಭಾರತೀಯ ಎಂಬ ಸಾಧನೆಯನ್ನೂ ಮಾಡಲಿದ್ದಾರೆ.