MI vs LSG: ಇಂದು (ಏ.27) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಸೋತ ಎಂಐ ಮೊದಲು ಬ್ಯಾಟ್ ಮಾಡಿದೆ.
ಇದನ್ನೂ ಓದಿ: Govinda Karjol Statement | ಕೇವಲ ಪಾಕಿಸ್ತಾನದ ಮುಸ್ಲಿಂರ ಬಗ್ಗೆ ಕಾಂಗ್ರೆಸ್ನವರಿಗೆ ಕಳಕಳಿ ಹೆಚ್ಚಾಗಿದೆ
ಟಾಸ್ ಸೋತ ಮುಂಬೈ ಇಂಡಿಯನ್ಸ್ ಪಡೆ ಮೊದಲು ಬ್ಯಾಟಿಂಗ್ಗೆ ಇಳಿದಿದ್ದು, ಲಖನೌ ತಂಡಕ್ಕೆ ಮರಳಿರುವ ಮಯಾಂಕ್ ಯಾದವ್ ಅವರ ಓವರ್ನಲ್ಲಿ ರೋಹಿತ್ ಶರ್ಮ ಎರಡು ಸಿಕ್ಸರ್ಗಳನ್ನು ಸಿಡಿಸಿದರು. ಆರಂಭದಲ್ಲೇ ಅಬ್ಬರಿಸಲು ಪ್ರಾರಂಭಿಸಿದ ರೋಹಿತ್ ಆರ್ಭಟಕ್ಕೆ ಬ್ರೇಕ್ ಹಾಕಿದ ಮಯಾಂಕ್, ಗಂಟೆಗೆ 156.7 ಕಿ.ಮೀ ವೇಗದಲ್ಲಿ ಬಾಲ್ ಎಸೆದು, ಸ್ಫೋಟಕವಾಗಿ ಕಾಣಿಸುತ್ತಿದ್ದ ರೋಹಿತ್ರನ್ನು (12 ರನ್) ಪೆವಿಲಿಯನ್ಗೆ ಕಳುಹಿಸಿದರು.
ಇನ್ನು ತನ್ನ ವಿಚಿತ್ರ ಸಂಭ್ರಮಕ್ಕೆ ಎರಡು ಬಾರಿ ಬಿಸಿಸಿಐನಿಂದ ದಂಡ ಪಡೆದಿದ್ದರೂ ಬುದ್ಧಿ ಕಲಿಯದ ಲಖನೌ ಬೌಲರ್ ದಿಗ್ವೇಶ್ ರಥಿ, ಇಂದಿನ ಪಂದ್ಯದಲ್ಲಿಯೂ ಅದೇ ರೀತಿಯ ಸಂಭ್ರಮವನ್ನು ಮೈದಾನದಲ್ಲಿ ಮರುಕಳಿಸಿದ್ದಾರೆ. ಮುಂಬೈ ಪರ ಓಪನಿಂಗ್ನಲ್ಲೇ ಆರ್ಭಟಿಸಿದ ರಿಯಾನ್ ರಿಕಲ್ಟನ್ ಅವರ ವಿಕೆಟ್ ಪಡೆಯುತ್ತಿದ್ದಂತೆ ನೆಲದ ಮೇಲೆ ಬರೆದು, ರಥಿ ಸಂಭ್ರಮಿಸಿದ್ದಾರೆ. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ.