ಕ್ರೀಡೆ

ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ 2 ವರ್ಷಗಳ ಬಳಿಕ ಅಗ್ರ 10ರೊಳಗೆ ಬಂದ ರಿಷಭ್​ ಪಂತ್​!

ನವದೆಹಲಿ: ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ನ್ಯೂಜಿಲೆಂಡ್​ ವಿರುದ್ಧ ಸರಣಿಯಲ್ಲಿ ಗರಿಷ್ಠ ರನ್​ ಗಳಿಸಿದ ಭಾರತೀಯರೆನಿಸುವುದರೊಂದಿಗೆ ಐಸಿಸಿ ಟೆಸ್ಟ್​ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ 2 ವರ್ಷಗಳ ಬಳಿಕ ಅಗ್ರ 10ರೊಳಗೆ ಸ್ಥಾನ ಸಂಪಾದಿಸಿದ್ದಾರೆ.

ಮುಂಬೈ ಟೆಸ್ಟ್​ನ ಎರಡೂ ಇನಿಂಗ್ಸ್​ಗಳಲ್ಲಿ ಅರ್ಧಶತಕ ಬಾರಿಸಿದ್ದ ಪಂತ್​, 5 ಸ್ಥಾನ ಬಡ್ತಿ ಪಡೆದು 6ನೇ ಸ್ಥಾನ ಅಲಂಕರಿಸಿದ್ದಾರೆ. 2022ರ ಜುಲೈನಲ್ಲಿ 5ನೇ ಸ್ಥಾನ ಗಳಿಸಿದ್ದು ಅವರ ಜೀವನಶ್ರೇಷ್ಠ ರ‍್ಯಾಂಕ್​ ಆಗಿದೆ. ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ ಒಂದು ಸ್ಥಾನ ಕುಸಿದು 4ನೇ ಸ್ಥಾನದಲ್ಲಿದ್ದರೂ, ಈಗಲೂ ಭಾರತದ ಅಗ್ರ ಶ್ರೇಯಾಂಕಿತ ಟೆಸ್ಟ್​ ಬ್ಯಾಟರ್​ ಎನಿಸಿದ್ದಾರೆ. 16ನೇ ಸ್ಥಾನಕ್ಕೇರಿರುವ ಶುಭಮಾನ್​ ಗಿಲ್​ ಅಗ್ರ 20ರೊಳಗಿರುವ ಮತ್ತೋರ್ವ ಭಾರತೀಯರಾಗಿದ್ದಾರೆ. ಇಂಗ್ಲೆಂಡ್​ನ ಜೋ ರೂಟ್​, ನ್ಯೂಜಿಲೆಂಡ್​ನ ಕೇನ್​ ವಿಲಿಯಮ್ಸನ್​ ಮತ್ತು ಇಂಗ್ಲೆಂಡ್​ನ ಹ್ಯಾರಿ ಬ್ರೂಕ್​ ಮೊದಲ 3 ಸ್ಥಾನದಲ್ಲಿದ್ದಾರೆ.

6ಕ್ಕೇರಿದ ಜಡೇಜಾ: ಮುಂಬೈ ಟೆಸ್ಟ್​ನಲ್ಲಿ 10 ವಿಕೆಟ್​ ಗೊಂಚಲು ಪಡೆದ ರವೀಂದ್ರ ಜಡೇಜಾ ಟೆಸ್ಟ್​ ಬೌಲಿಂಗ್​ ರ‍್ಯಾಂಕಿಂಗ್​ನಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ವಾಷಿಂಗ್ಟನ್​ ಸುಂದರ್​ 46ನೇ ಸ್ಥಾನಕ್ಕೇರಿದ್ದಾರೆ. ಆರ್​. ಅಶ್ವಿನ್​ 4ರಿಂದ 5ನೇ ಸ್ಥಾನಕ್ಕಿಳಿದಿದ್ದಾರೆ.