Rishabh Pant: ನಿನ್ನೆ (ಮಾ.24) ನಡೆದ ಐಪಿಎಲ್ ನಾಲ್ಕನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭಾರೀ ಪೈಪೋಟಿಗೆ ಸಾಕ್ಷಿಯಾಯಿತು. ಕೊನೆ ಓವರ್ವರೆಗೂ ತಲುಪಿದ ಈ ಪಂದ್ಯ ಭಾರೀ ರೋಚಕತೆಗೆ ತಿರುಗಿದ್ದು ಮಾತ್ರ ಕ್ರಿಕೆಟ್ ಅಭಿಮಾನಿಗಳನ್ನು ಕುರ್ಚಿಯ ತುದಿಗೆ ತಂದು ಕೂರಿಸಿತು. ಕೇವಲ ಒಂದೇ ಒಂದು ವಿಕೆಟ್ನಿಂದ ಲಖನೌ ನೀಡಿದ್ದ 200ರ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಅಶುತೋಶ್ ಶರ್ಮ ಅವರ ಸ್ಫೋಟಕ ಬ್ಯಾಟಿಂಗ್ನಿಂದ ಭರ್ಜರಿ ಗೆಲುವು ಸಾಧಿಸಿತು.
ಇದನ್ನೂ ಓದಿ: ಇದೇ ಸೈಜ್ ಕಾಂಡೋಮ್… ಸ್ಕ್ರೀನ್ಶಾಟ್ಗಳೇ ಜ್ವಲಂತ ಸಾಕ್ಷಿ! ಪತ್ನಿಯ ಕರ್ಮಕಾಂಡ ಬಟಾಬಯಲು ಮಾಡಿದ ಟೆಕ್ಕಿ | Chennai Techie
ಐಪಿಎಲ್ ಹರಾಜಿನಲ್ಲಿ ರಿಷಭ್ ಪಂತ್ರನ್ನು ಬರೋಬ್ಬರಿ 27 ಕೋಟಿ ರೂ. ಮೊತ್ತಕ್ಕೆ ಖರೀದಿ ಮಾಡಿದ ಲಖನೌ ಸೂಪರ್ ಜೈಂಟ್ಸ್, ರಿಷಬ್ರನ್ನೇ ತಂಡದ ನಾಯಕನಾಗಿ ನೇಮಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಿಷಭ್, ಆವೃತ್ತಿಯ ಮೊದಲ ಪಂದ್ಯದಲ್ಲೇ ಶೂನ್ಯ ರನ್ಗೆ ಪೆವಿಲಿಯನ್ನತ್ತ ಮುಖಮಾಡಿದರು. ಇದು ಕ್ರಿಕೆಟ್ ಪ್ರಿಯರ ಅಚ್ಚರಿಗೆ ಕಾರಣವಾಯಿತು. ಶೂನ್ಯಕ್ಕೆ ಪೆವಿಲಿಯನ್ ಹಾದಿ ಹಿಡಿದ ಪಂತ್, ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕರನ್ನು ಅಸಮಾಧಾನಕ್ಕೆ ಕಾರಣರಾದರು.
"ಪವರ್‌ಪ್ಲೇ ಓವರ್‌ಗಳಲ್ಲಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವ ಸಾಮರ್ಥ್ಯವುಳ್ಳ ರಿಷಭ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿಯುವುದು ಉತ್ತಮ ಎಂಬುದು ನನ್ನ ಅನಿಸಿಕೆ. ಓಪನರ್ ಆಗಿ ತಂಡದ ಪರ ಇನ್ನಿಂಗ್ಸ್ ಆರಂಭಿಸಲಿ" ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಿಸಿದರು. ಇದೇ ವೇಳೆ ರಾಬಿನ್ ಉತ್ತಪ್ಪ ಕೂಡ ಮಾತನಾಡಿ, "ಪಂತ್ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯಬೇಕು ಅಥವಾ ಮೂರನೇ ಕ್ರಮಾಂಕದಲ್ಲಿ ಆದರೂ ಆಡಬೇಕು. ಇದರಿಂದ ಪಂತ್ ಬಹಳಷ್ಟು ರನ್ ಗಳಿಸಬಹುದು" ಎಂದು ಸಲಹೆ ನೀಡಿದರು,(ಏಜೆನ್ಸೀಸ್).