ಕ್ರೀಡೆ

ಆರ್​ಸಿಬಿ-ಸಿಎಸ್​ಕೆ ಕದನಕ್ಕೆ ಮಳೆ ಆತಂಕ; ತವರಿನಲ್ಲಿ ಧೋನಿ ಪಡೆಗೆ ಸೋಲುಣಿಸುವ ಕನಸು ಭಗ್ನ? | RCB vs CSK

ಮೋಹನ್​ ಶೆಟ್ಟಿ

RCB vs CSK: ಇಂದು (ಮೇ.03) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರಿಯರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಕುತೂಹಲ, ಕೌತುಕಕ್ಕೆ ಇದೀಗ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದ್ದು, ಪಂದ್ಯ ಡ್ರಾ ಆಗುವ ಮುನ್ಸೂಚನೆ ಲಭಿಸಿದೆ.

ಪ್ರಸ್ತುತ ಅಂಕಪಟ್ಟಿಯಲ್ಲಿ 14 ಪಾಯಿಂಟ್​ನಿಂದ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಈ ಮೊದಲು ಸಿಎಸ್​ಕೆ ತಂಡವನ್ನು ಅವರ ತವರಿನಲ್ಲೇ ಹೀನಾಯವಾಗಿ ಮಣಿಸಿದೆ. ಚೆಪಾಕ್​ ಅಂಗಳದಲ್ಲೇ 50 ರನ್​ಗಳ ಅಂತರದಲ್ಲಿ ಚೆನ್ನೈ ಪಡೆಗೆ ಭಾರೀ ಮುಖಭಂಗ ಉಂಟು ಮಾಡಿದ್ದ ಆರ್​ಸಿಬಿ, ಇದೀಗ ತಮ್ಮ ತವರಿನಲ್ಲಿ ಎರಡನೇ ಬಾರಿಗೆ ಸೋಲಿಸಲು ಎದುರುನೋಡುತ್ತಿದೆ. ಆದರೆ, ಇದಕ್ಕೆ ವರುಣನ ಅಡ್ಡಿ ಎದುರಾಗಿದೆ.

ಹವಾಮಾನ ಇಲಾಖೆಯ ವರದಿ ಪ್ರಕಾರ, ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ನಾಲ್ಕು ದಿನಗಳು ಮಳೆ ಸುರಿಯಲಿದೆ ಎಂದು ತಿಳಿಸಿದೆ. ರಾಜಧಾನಿಯಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಲಿದೆ ಎಂದು ಸೂಚಿಸಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಯ ನಂತರ ವರುಣನ ಆರ್ಭಟ ಜೋರಾಗಲಿದೆ ಎನ್ನಲಾಗಿದೆ. ಸದ್ಯ ಈ ಸಂಗತಿ ಆರ್​ಸಿಬಿ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿದೆ. ಈಗಾಗಲೇ ಪ್ಲೇಆಫ್ ರೇಸ್​ನಿಂದ ಕಿಕ್​ಔಟ್ ಆಗಿರುವ ಸಿಎಸ್​ಕೆ, ಮುಂದಿನ ಪಂದ್ಯಗಳು ಗೆದ್ದರೂ ಪ್ರಯೋಜನವಿಲ್ಲ. ಈ ವಿಷಯ ಸಿಎಸ್​ಕೆ ಫ್ಯಾನ್ಸ್​ಗಳಿಗೆ ತುಂಬಲಾರದ ನಷ್ಟ ಎನ್ನುವಂತಾಗಿದೆ,(ಏಜೆನ್ಸೀಸ್).