ಕ್ರೀಡೆ

IPL 2025: ಇದೇ ನೋಡಿ RCBಯ ಸಂಭಾವ್ಯ ಪ್ಲೇಯಿಂಗ್​ ಇಲೆವೆನ್​! 22 ಆಟಗಾರರಲ್ಲಿ ಆಡುವ 11 ಮಂದಿ ಇವರೇನಾ?

RCB : ಐಪಿಎಲ್​ 18ನೇ ಆವೃತ್ತಿಯ ಎರಡು ದಿನಗಳ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು ಬಿಕರಿಯಾದರು. ಮೊದಲ ದಿನ 72 ಆಟಗಾರರ ಬಿಕರಿಯಾಗಿತ್ತು. 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದವು. ಒಟ್ಟು 8 ಆರ್​ಟಿಎಂ ಕೂಡ ಬಳಕೆಯಾಯಿತು. 2025ರ ಮಾರ್ಚ್​ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ.

ಈ ಬಾರಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಹೊಸತನದೊಂದಿಗೆ ಐಪಿಎಲ್​ ಕಣಕ್ಕಿಳಿಯಲಿದೆ. ಎರಡು ದಿನಗಳ ಬಿಡ್ಡಿಂಗ್‌ನಲ್ಲಿ ಒಟ್ಟು 22 ಆಟಗಾರರು ಆರ್​ಸಿಬಿ ಸೇರಿಕೊಂಡಿದ್ದಾರೆ. ಹಿಂದಿನ ತಂಡಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಆರ್​ಸಿಬಿ ಕಂಪ್ಲೀಟ್​ ಬದಲಾದಂತೆ ಕಾಣುತ್ತದೆ. ಬಹುತೇಕ ಹಳೆಯ ಆಟಗಾರರಿಗೆ ಗೇಟ್​ಪಾಸ್​ ನೀಡಲಾಗಿದೆ. ಈ ಬಾರಿ ಉತ್ತಮ ಬೌಲರ್​ಗಳಿಗೆ ಮನ್ನಣೆ ನೀಡಿದ್ದು, ಸಮತೋಲಿತ ತಂಡವಾಗಿ ರೂಪುಗೊಂಡಿದೆ. ಆರ್​ಸಿಬಿ ಅಭಿಮಾನಿಗಳು ಕೂಡ ತುಂಬಾ ಖುಷಿಯಾಗಿದ್ದಾರೆ. ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ವಿಶ್ವ ಟಿ20ಯ ನಂಬರ್​ 2 ಬ್ಯಾಟ್ಸ್​ಮನ್​ ಫಿಲ್​ ಸಾಲ್ಟ್​, ಆಸ್ಟ್ರೇಲಿಯದ ಜೋಶ್ ಹ್ಯಾಸಲ್‌ವುಡ್ ಹಾಗೂ ಟಿಮ್ ಡೇವಿಡ್ ಆರ್​ಸಿಬಿ ಬಳಗ ಸೇರಿದ್ದಾರೆ.

ಸಂಪೂರ್ಣ ಆರ್​ಸಿಬಿ ತಂಡ

ಜೋಶ್​ ಹ್ಯಾಸಲ್​ವುಡ್​ (12.50 ಕೋಟಿ), ಫಿಲ್​ ಸಾಲ್ಟ್​ (11.50 ಕೋಟಿ), ಜಿತೇಶ್​ ಶರ್ಮ (11 ಕೋಟಿ), ಲಿಯಾಮ್​ ಲಿವಿಂಗ್​ಸ್ಟೋನ್​ (8.75 ಕೋಟಿ), ರಸಿಕ್​ ಸಲಾಂ (6 ಕೋಟಿ), ಸುಯಶ್​ ಶರ್ಮ (2.60 ಕೋಟಿ). ಭುವನೇಶ್ವರ್​ ಕುಮಾರ್​ (10.75 ಕೋಟಿ), ಕೃನಾಲ್​ ಪಾಂಡ್ಯ (5.75 ಕೋಟಿ), ಟಿಮ್​ ಡೇವಿಡ್​ (3 ಕೋಟಿ), ಜೇಕಬ್​ ಬೆಥೆಲ್​ (2.60 ಕೋಟಿ), ದೇವದತ್​ ಪಡಿಕ್ಕಲ್​ (2 ಕೋಟಿ), ನುವಾನ್​ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್​ (1.50 ಕೋಟಿ), ಸ್ವಪ್ನಿಲ್​ ಸಿಂಗ್​ (50 ಲಕ್ಷ), ಮನೋಜ್​ ಭಾಂಡಗೆ (30 ಲಕ್ಷ), ಸ್ವಸ್ತಿಕ್​ ಚಿಕರ (30 ಲಕ್ಷ), ಮೋಹಿತ್​ ರಾಥೀ (30 ಲಕ್ಷ), ಅಭಿನಂದನ್​ ಸಿಂಗ್​ (30 ಲಕ್ಷ), ಲುಂಗಿ ಎನ್​ಗಿಡಿ (1 ಕೋಟಿ).

ಒಟ್ಟು ಆಟಗಾರರು: 22 (8 ವಿದೇಶಿ), ರಿಟೇನ್​-ಹರಾಜಿನ ಒಟ್ಟು ವೆಚ್ಚ: 119.25 ಕೋಟಿ.

ಆರ್​ಸಿಬಿ ತಂಡ ಸಂಯೋಜನೆ - IPL 2025

ಬ್ಯಾಟರ್​ಗಳು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ.

ವಿಕೆಟ್​ ಕೀಪರ್ಸ್​: ಫಿಲ್​ ಸಾಲ್ಟ್​ ಮತ್ತು ಜಿತೇಶ್​ ಶರ್ಮ

ಆಲ್​ರೌಂಡರ್ಸ್​ : ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ ಹಾಗೂ ಜಾಕೋಬ್ ಬೆಥೆಲ್.

ಫಾಸ್ಟ್​ ಬೌಲರ್ಸ್​: ಜೋಶ್ ಹ್ಯಾಸಲ್‌ವುಡ್, ರಸಿಖ್ ದಾರ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ಲುಂಗಿ ಎನ್‌ಗಿಡಿ ಹಾಗೂ ಅಭಿನಂದನ್ ಸಿಂಗ್.

ಸ್ಪಿನ್ನರ್‌ಗಳು: ಸುಯಶ್ ಶರ್ಮಾ ಹಾಗೂ ಮೋಹಿತ್ ರಾಥಿ.

ಆರ್​ಸಿಬಿ ಆಡುವ ಹನ್ನೊಂದರ ಬಳಗ (ಅಂದಾಜು)

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ರಜತ್ ಪಾಟಿದಾರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಸ್​ಲ್‌ವುಡ್ ಹಾಗೂ ಸುಯಾಶ್ ಶರ್ಮಾ.

ಒಟ್ಟಾರೆ ಆರ್​ಸಿಬಿ ತಂಡ ಈ ಬಾರಿ ಹರಾಜಿನಲ್ಲೇ ಭರವಸೆ ಮೂಡಿಸಿದ್ದು, ಈ ಸಲ ಕಪ್​ ನಮ್ಮದೇ ಎಂದು ಜೋರಾಗಿ ಹೇಳುವಂತೆ ಮಾಡಿದೆ. ಏಕೆಂದರೆ, ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಈ ಬಾರಿ ಆರ್​ಸಿಬಿ ತಂಡ ಸಮತೋಲನ ಕಾಯ್ದುಕೊಂಡಿದೆ. ಕಳೆದ 17 ಸೀಸನ್​ಗಳಿಂದ ಕೇಳಿಬರುತ್ತಿದ್ದ ಈ ಸಲ ಕಮ್​ ನಮ್ಮದೇ ಎಂಬ ಮಾತು ಈ ಬಾರಿಯಾದರೂ ನಿಲ್ಲುತ್ತಾ ಕಾಯಬೇಕಿದೆ. (ಏಜೆನ್ಸೀಸ್​)