RCB: ಮೇ.8ರಂದು ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ 10 ಓವರ್‌ಗೆ ರದ್ದಾಗಿತ್ತು. ಪಾಕಿಸ್ತಾನ ಮತ್ತು ಭಾರತ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದ್ದ ಹಿನ್ನೆಲೆ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು. ಅಂತೆಯೇ ಇದೀಗ ಮರು ವೇಳಾಪಟ್ಟಿ ಪ್ರಕಟಿಸಿರುವ ಬಿಸಿಸಿಐ, ಮೇ.17ರಿಂದ ಉಳಿದಿರುವ ಐಪಿಎಲ್ ಪಂದ್ಯಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಲೀಗ್ ಪುನಾರಂಭಗೊಂಡಿದ್ದೇ ಆದರೂ ಆರ್ಸಿಬಿಗೆ ಮಾತ್ರ ದೊಡ್ಡ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: 17ರಂದು ಚುನಾಯಿತ ಸಹಕಾರಿಗಳ ಸಮಾವೇಶ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ : ವೆಂಕಟ್ ವಳಲಂಬೆ ಮಾಹಿತಿ
ಪ್ರಸ್ತುತ 11 ಪಂದ್ಯಗಳನ್ನಾಡಿರುವ ಆರ್ಸಿಬಿ 8ರಲ್ಲಿ ಗೆಲುವು ಸಾಧಿಸಿ ಮೂರರಲ್ಲಿ ಸೋಲುಂಡಿದೆ. ಈ ಮೂರು ಪಂದ್ಯಗಳನ್ನು ತವರಿನಲ್ಲೇ ಸೋತಿದೆ. ಸತತವಾಗಿ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುತ್ತ ಬಂದಿರುವ ಆರ್ಸಿಬಿ, ಐಪಿಎಲ್ ಅಂಕಪಟ್ಟಿಯ ನಾಲ್ಕು ಸ್ಥಾನಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಹೀಗಿರುವಾಗಲೇ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿದ್ದು, ತಂಡದಲ್ಲಿರುವ ಹಲವು ಆಟಗಾರರು ಫ್ರಾಂಚೈಸಿಯನ್ನು ಅನಿವಾರ್ಯ ಕಾರಣಗಳಿಂದ ತೊರೆದಿದ್ದಾರೆ.
ಕ್ಯಾಪ್ಟನ್ ರಜತ್ ಪಾಟಿದಾರ್ ಇಂಜುರಿಯಿಂದ ಬಳಲುತ್ತಿದ್ದು, ತಂಡದಿಂದ ಹೊರಗುಳಿದಿದ್ದಾರೆ. ಉಳಿದ ಪಂದ್ಯಗಳಲ್ಲಿ ಅವರ ಸ್ಥಾನವನ್ನು ವಿರಾಟ್ ಕೊಹ್ಲಿ ಅಥವಾ ಜಿತೇಶ್ ಶರ್ಮಾ ತುಂಬುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಮರು ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಫ್ರಾಂಚೈಸಿ ಆಡಲಿರುವ ಪಂದ್ಯಗಳಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡಲಿದೆ.
ಇದನ್ನೂ ಓದಿ: ಮುಳುಗು ಸೇತುವೆಯಿಂದ ಮುಕ್ತಿ: ಕೋಟೆಹೋಳೆ ಸೇತುವೆ ಕಾಮಗಾರಿ ಪೂರ್ಣ : ಸಂಪರ್ಕ ರಸ್ತೆ ನಿರ್ಮಾಣ ಪ್ರಗತಿಯಲ್ಲಿ
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯು ಐಪಿಎಲ್ ಅಂತ್ಯಕ್ಕೂ ಮೊದಲೇ (ಮೇ 29) ಶುರುವಾಗಲಿದೆ. ಇನ್ನು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಡಬ್ಲ್ಯೂಟಿಸಿ ಫೈನಲ್ ಜೂನ್ 11ರಿಂದ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ, ಆರ್ಸಿಬಿ ಪರ ಆಡುವ ಸ್ಟಾರ್ ಆಟಗಾರರೇ ತಂಡದಲ್ಲಿ ಅಲಭ್ಯವಾಗಿರುವುದು ಫ್ರಾಂಚೈಸಿ ಅಭಿಮಾನಿಗಳ ಗೆಲುವಿನ ಲೆಕ್ಕಾಚಾರಕ್ಕೆ ದೊಡ್ಡ ಹೊಡೆತ ನೀಡಿದೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹೆಜಲ್ವುಡ್ ಫ್ರಾಂಚೈಸಿ ಪರ ಮುಂದುವರಿಯುವುದು ಬಹುತೇಕ ಅನುಮಾನ.
ಮುಂದಿನ ಪಂದ್ಯಗಳಲ್ಲಿ ತಂಡದ ಪ್ರಮುಖ ಆಟಗಾರರು ಲಭ್ಯವಿಲ್ಲದಿದ್ದರೆ, ಆರ್ಸಿಬಿ ಗೆಲುವಿನ ಲಯ ಕಳೆದುಕೊಳ್ಳುವ ಅಪಾಯ ಹೆಚ್ಚಿದೆ. ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುತ್ತ ಬಂದಿರುವ ಆರ್ಸಿಬಿ ಈ ಬಾರಿಯ ಐಪಿಎಲ್ 18ನೇ ಆವೃತ್ತಿಯನ್ನು ಗೆದ್ದು ಬೀಗಲಿದೆ ಎಂದು ಅಭಿಮಾನಿಗಳು ಅಪಾರ ಭರವಸೆ ಹೊಂದಿದ್ದಾರೆ. ಆದರೆ, ಅಂದುಕೊಂಡಂತೆ ಈಡೇರಲಿದೆಯೇ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).