ಕ್ರೀಡೆ

ಕ್ರಿಕೆಟರ್ ಶ್ರೇಯಾಂಕ ಪಾಟೀಲ್‌ಗೆ ಮದುವೆ ಪ್ರಪೋಸಲ್‌ ಇಟ್ಟ ಅಭಿಮಾನಿ

ಬೆಂಗಳೂರು:ಪಂದ್ಯದ ವೇಳೆ ಆರ್‌ಸಿಬಿ ಸ್ಟಾರ್‌ ಶ್ರೇಯಾಂಕ ಪಾಟೀಲ್‌ ಅವರಿಗೆ ಅಭಿಮಾನಿಯೊಬ್ಬರು ಸ್ಟೇಡಿಯಂನಲ್ಲೇ ನಿಂತು ಮದುವೆ ಪ್ರಪೋಸಲ್‌ ನೀಡಿದ್ದಾರೆ. ಅಭಿಮಾನಿ ಪೋಸ್ಟರ್‌ ಹಿಡಿದಿದ್ದ ಫೋಟೋ ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಜೈಂಟ್ಸ್‌ ನಡುವಿನ ಪಂದ್ಯದ ವೇಳೆ ಆರ್‌ಸಿಬಿ ತಂಡದ ಅಭಿಮಾನಿಯೊಬ್ಬರು ಕರ್ನಾಟಕದವರೇ ಆದ ಶ್ರೇಯಾಂಕ ಪಾಟೀಲ್‌ ಅವರಿಗೆ ಮದುವೆ ಪ್ರಪೋಸಲ್‌ ಕೊಟ್ಟಿದ್ದಾರೆ.

ಪಂದ್ಯದ ವೇಳೆ ಆರ್‌ಸಿಬಿ ಅಭಿಮಾನಿ ʻನೀವು ನನ್ನನ್ನು ಮದುವೆಯಾಗುತ್ತೀರಾ ಶ್ರೇಯಾಂಕ ಪಾಟೀಲ್?, ನಾನು ಉತ್ತರ ಕರ್ನಾಟಕʼ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಲವ್‌ ಸಿಂಬಲ್‌ ಅನ್ನು ಪೋಸ್ಟರ್‌ನಲ್ಲಿ ಬಿಡಿಸಿದ್ದಾರೆ.

ಅಭಿಮಾನಿಯ ಈ ಫೋಟೋ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪೋಸ್ಟ್‌ ಬಗ್ಗೆ ಶ್ರೇಯಾಂಕ ಪಾಟೀಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.