ಕ್ರೀಡೆ

ಬೌಂಡ್ರಿ ಲೈನ್​ನಲ್ಲಿ ಆಕಳಿಸಿದ ಬಾಲ್​ಬಾಯ್​! ರವಿಶಾಸ್ತ್ರಿ ಕಾಮೆಂಟ್ರಿ ಕೇಳಿದ್ರೆ ಖಂಡಿತ ನಗ್ತೀರಿ, ಇಲ್ಲಿದೆ ನೋಡಿ ವಿಡಿಯೋ

ರಾಂಚಿ: ಇಂದು (ಫೆ.23) ರಾಂಚಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ಬೌಂಡರಿ ಲೈನ್​ನಲ್ಲಿದ್ದ ಬಾಲ್ ಬಾಯ್, ಸೋಮಾರಿತನದಿಂದ ಮಲಗಿ ಆಕಳಿಸಿದ್ದಲ್ಲದೇ, ತನ್ನ ತೊಡೆಯನ್ನು ಕೆರೆದುಕೊಂಡ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

72ನೇ ಓವರ್‌ನಲ್ಲಿ ಬೌಂಡರಿ ಹಗ್ಗದ ಹೊರಗೆ ಕುಳಿತ್ತಿದ್ದ ಬಾಲ್​ಬಾಯ್​ ತನ್ನ ಕಡೆಗೆ ಯಾವುದೇ ಬಾಲ್ ಬರುವುದಿಲ್ಲ ಎಂದು ಸುಮ್ಮನೆ ಮೈದಾನದಲ್ಲಿ ಮಲಗಿದ್ದಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಕ್ಯಾಮೆರಾಮನ್ ಸ್ಟೇಡಿಯಂನಲ್ಲಿ ಕುಳಿತಿದ್ದ ಇಂಗ್ಲಿಷ್ ಕ್ರಿಕೆಟ್ ಅಭಿಮಾನಿಯತ್ತ ಗಮನ ಹರಿಸುವ ಬದಲಿಗೆ ಈ ಹುಡುಗ ಆಕಳಿಸಿ, ತೊಡೆಯನ್ನು ಕೆರೆದುಕೊಳ್ಳುತ್ತಿದ್ದಾಗ ಪ್ಯಾನ್ ಮಾಡಿ ದೃಶ್ಯ ಸೆರೆಹಿಡಿದಿದ್ದಾರೆ.

ಆ ಸಮಯದಲ್ಲಿ ಕಾಮೆಂಟ್ರಿ ಮಾಡುತ್ತಿದ್ದ ರವಿಶಾಸ್ತ್ರಿ, ಆಕಳಿಸುತ್ತಿದ್ದ ಬಾಲ್ ಬಾಯ್‌ ನೋಡಿ, "ಎದ್ದೇಳಪ್ಪ... ಒಂದು ಲೋಟ ನೀರು ಕುಡಿ. ಕ್ರಿಕೆಟ್ ಮತ್ತಷ್ಟು ಆಸಕ್ತಿದಾಯಕವಾಗುತ್ತಿದೆ" ಎಂದು ಹೇಳಿದ್ದಾರೆ. ಪ್ರತ್ಯೇಕವಾಗಿ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕೂಡ ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).