More

    ನಿವೇಶನ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯ: ತಹಸೀಲ್ದಾರ್ ಗೈರಿಗೆ ಗ್ರಾಮಸ್ಥರು ಗರಂ

    ವಿಜಯವಾಣಿ ಸುದ್ದಿಜಾಲ ಗುರುಪುರ

    ಮುತ್ತೂರು ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಆಳ್ವ ಅಧ್ಯಕ್ಷತೆಯಲ್ಲಿ ಗುರುವಾರ ಕುಳವೂರು ಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

    ತಹಸೀಲ್ದಾರ್ ಉಪಸ್ಥಿತರಿರಬೇಕು ಎಂದು ಕಳೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದರು. ಪ್ರಸಕ್ತ ಗ್ರಾಮಸಭೆಗೂ ಅವರು ಗೈರಾಗಿರುವ ಕಾರಣ ಅಸಮಾಧಾನಗೊಂಡ ಗ್ರಾಮಸ್ಥರು ಸಭೆ ಮುಂದೂಡುವಂತೆ ಆಗ್ರಹಿಸಿದರು.

    ಕುಳವೂರು ಗ್ರಾಮದಲ್ಲಿ ಹಂಚಿಕೆಯಾಗಿರುವ ನಿವೇಶನದ ಬಗ್ಗೆ ತನಿಖೆಯಾಗಬೇಕು. ನಿವೇಶನ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯವಾಗಿದೆ ಎಂದು ಗೋಪಾಲ ಮುತ್ತೂರು ಹೇಳಿದರು.

    ನಿವೇಶನ ಫಲಾನುಭವಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚೆ, ವಾಗ್ವಾದ ನಡೆಯಿತು. ಕಡೆಂಜೆಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವರ್ಗಾವಣೆಯಾಗಿದ್ದಾರೆ. ಈಗ ಗೆಂದಡ್ಪು ಅಂಗನವಾಡಿಯ ಕಾರ್ಯಕರ್ತೆ ಅಲ್ಲಿ(ಕಡೆಂಜೆಬೆಟ್ಟು) ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಗೆಂದಡ್ಪು ಅಂಗನವಾಡಿಯಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಗ್ರಾಮಸ್ಥರು ಒತ್ತಡ ಹೇರಿದರು.
    ಗ್ರಾಮೀಣ ಭಾಗದ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಲ್ಲಿ ಗ್ರಾಮೀಣ ಭಾಗದ ಬರೆಯಲು ಬಾರದ ಅಥವಾ ಇಂಗ್ಲಿಷ್ ಗೊತ್ತಿಲ್ಲದವರ ನೆರವಿಗೆ ಸಹಾಯಕರನ್ನು ನೇಮಿಸಬೇಕು ಎಂದು ಶೇಖರ ನೇಲಚ್ಚಿಲ್ ಆಗ್ರಹಿಸಿದರು.

    ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಾಲಕ್ಷ್ಮೀ ನೋಡಲ್ ಅಧಿಕಾರಿಯಾಗಿದ್ದರು. ಮೆಸ್ಕಾಂ, ಕಂದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ, ತೋಟಗಾರಿಕೆ, ಕೃಷಿ, ಶಿಕ್ಷಣ ಇಲಾಖೆ, ಅಬಕಾರಿ, ಜಿಪಂ ಇಂಜಿನಿಯರಿಂಗ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಉಪಾಧ್ಯಕ್ಷೆ ಸುಷ್ಮಾ ಎಸ್., ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು. ಪಿಡಿಒ ಪ್ರಮೋದ್ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ವಸಂತಿ ವರದಿ ಓದಿದರು. ಸಿಬ್ಬಂದಿ ನಾಡಗೀತೆ ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts