More

    ಮೃತಳ ಕುಟುಂಬಕ್ಕೆ ರಕ್ಷಣೆ ನೀಡಿ

    ಮಾನ್ವಿ: ಕೊಲೆಗೈದ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ವೀರಶೈವ ಲಿಂಗಾಯತ ತಾಲೂಕು ಸಮುದಾಯ, ಬೇಡ ಜಂಗಮ ತಾಲೂಕು ಸಮುದಾಯ, ಎಬಿವಿಪಿ ಸಂಘಟನೆ ಮತ್ತು ಕರ್ನಾಟಕ ವಾಲ್ಮೀಕಿ ನಾಯಕ ತಾಲೂಕು ಮಹಾಸಭಾ ಜಂಟಿಯಾಗಿ ಪಟ್ಟಣದ ತಹಸಿಲ್ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಿದವು.

    ಇದಕ್ಕೂ ಮುನ್ನ ಬಸವೃತ್ತದಲ್ಲಿ ಜಮಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಒಂದು ಗಂಟೆ ಬಸವ ವೃತ್ತದಲ್ಲಿ ರಸ್ತೆ ತಡೆ ಕೊಲೆ ಘಟನೆ ಖಂಡಿಸಿ ಪ್ರತಿಭಟಿಸಿದವು. ಈಗಾಗಲೇ ಕೊಲೆ ಆರೋಪಿ ಫಯಾಜ್‌ನನ್ನು ಬಂಧಿಸಲಾಗಿದೆ. ಆದರೆ ವಿದ್ಯಾರ್ಥಿನಿಯ ಹತ್ಯೆ ಕೃತ್ಯ ನಡೆಸಲು ನೆರವಾದ ಎಲ್ಲರನ್ನೂ ಕೂಡಲೇ ಬಂಧಿಸಬೇಕು. ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಓಲೈಸುವ ನೆಪದಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಸರ್ಕಾರ ಮೃತ ನೇಹಾ ಹಿರೇಮಠ ಕುಟುಂಬಕ್ಕೆ ಅಗತ್ಯವಾದ ರಕ್ಷಣೆ ನೀಡಬೇಕು. ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

    ವೀರಶೈವ ಲಿಂಗಾಯತ ಸಮುದಾಯದ ತಾಲೂಕಾಧ್ಯಕ್ಷ ಹರಿಹರ ಪಾಟೀಲ್, ಕಾರ್ಯಾಧ್ಯಕ್ಷ ಶ್ರೀಧರಸ್ವಾಮಿ, ಪ್ರಮುಖರಾದ ಎ.ಬಿ.ಉಪಳಮಠ ವಕೀಲರು, ವೀರನಗೌಡ ವಕೀಲರು, ಶಿವಶಂಕ್ರಯ್ಯಸ್ವಾಮಿ, ಡಾ.ಚಂದ್ರಶೇಖರ, ಕರವೇ ತಾಲೂಕು ಅಧ್ಯಕ್ಷ ಬಸವನಗೌಡ, ಜಗದೀಶ್, ಬಸವರಾಜ ಮಾಲಿಪಾಟೀಲ್, ಅಯ್ಯಪ್ಪನಾಯಕ, ವಿರೇಶನಾಯಕ ಬೆಟ್ಟದೂರು, ಹನುಮೇಶ ನಾಯಕ, ರಾಮಣ್ಣ ನಾಯಕ, ವಿಜಯ್‌ಕುಮಾರ್ ಶಿವರ್ಜುನ ನಾಯಕ, ನರಸಯ್ಯನಾಯಕ ಮ್ಯಾಕಲ್, ರೇಣುಕಾರಾಜ, ಮಲ್ಲಯ್ಯನಾಯಕ, ವೆಂಕಟೇಶನಾಯಕ, ನಿಂಗಯ್ಯನಾಯಕ, ವೀರೇಶನಾಯಕ ಯಡಿವಾಳ, ಈರಣ್ಣ ನಾಯಕ, ನಿಂಗಯ್ಯನಾಯಕ, ಲಕ್ಷ್ಮಣನಾಯಕ, ಅಮರೇಶನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts