ಕ್ರೀಡೆ

ಕ್ರಿಕೆಟಿಗರನ್ನು ಬಿಡದ 'ಪುಷ್ಪ' ಚಿತ್ರದ ಹುಚ್ಚು! ಫೋಟೋ, ವಿಡಿಯೋ ವೈರಲ್...

'ಪುಷ್ಪ' ಚಿತ್ರದ ಹಾಡುಗಳು ಮತ್ತು ಡೈಲಾಗ್​ಗಳ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಹೆಚ್ಚು ಆಗುತ್ತಿದೆ. ನಟ ಅಲ್ಲು ಅರ್ಜುನ್ ಅಭಿಮಾನಿಗಳು, ಸಿನಿ ಲವರ್ಸ್, ಪ್ರೇಕ್ಷಕರು, ಸಾಮಾನ್ಯರು ಎಂಬಂತೆ ಎಲ್ಲರೂ 'ಪುಷ್ಪ' ಚಿತ್ರದ ಹಾಡುಗಳು ಡ್ಯಾನ್ಸ್ ಮತ್ತು ಡೈಲಾಗ್​ಗಳನ್ನು ಅನುಕರಿಸುತ್ತಿದ್ದಾರೆ. ಇದೀಗ, ಈ ಸಾಲಿಗೆ ಸೇರುತ್ತಿರುವುದು ನಮ್ಮ ದೇಶದ ಕ್ರಿಕೆಟಿಗರು. ಹೌದು, 'ಪುಷ್ಪ' ಸಿನಿಮಾದಿಂದ ಅಲ್ಲು ಅರ್ಜುನ್ ಅವರ ಡೈಲಾಗ್​ಗಳು ಮತ್ತು ಲುಕ್​ಗಳನ್ನು ಅನುಕರಿಸುವ ಮಾಸ್ ಟ್ರೆಂಡ್​ಗೆ ಹೊಸದಾಗಿ ಸೇರಿಕೊಂಡವರು ರವೀಂದ್ರ ಜಡೇಜಾ ಮತ್ತು ಶಿಖರ್ ಧವನ್! ನಟ ಅಲ್ಲು ಅರ್ಜುನ್‌ ಮೇಲಿನ ಅಭಿಮಾನಿಗಳ ಹುಚ್ಚು ಮತ್ತು ಮಾಸ್ ಫ್ಯಾಂಡಮ್ ಸದ್ಯ ಈ ಚಿತ್ರದಿಂದ ಎಲ್ಲಾ ಗಡಿಗಳು ಮತ್ತು ಭಾಷೆಯ ಅಡೆತಡೆಗಳನ್ನು ದಾಟಿ ಜತೆಗೆ ಮೀರಿದೆ. 'ಪುಷ್ಪಾ' ದೇಶಾದ್ಯಂತ ಅಲ್ಲು ಅರ್ಜುನ್ ಅವರ ಸೂಪರ್‌ಸ್ಟಾರ್‌ಡಮ್‌ಗೆ ಮಿತಿಯಿಲ್ಲದಂತೆ ಮಾಡಿದೆ. 
ಇತ್ತೀಚೆಗೆ, ಕ್ರಿಕೆಟಿಗ ರವೀಂದ್ರ ಜಡೇಜಾ ಅಲ್ಲು ಅರ್ಜುನ್ ಅವರ 'ಪುಷ್ಪಾ' ಸಿನಿಮಾದ ಪ್ರಸಿದ್ಧ ನೋಟವೊಂದನ್ನು ಅನುಕರಿಸಿದರು. ಜತೆಗೆ ಅವರ ಅನುಕರಣೆಯನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈಗ, ರವೀಂದ್ರ ಜಡೇಜಾ ಅವರು ಹಂಚಿಕೊಂಡಿರುವ ಅವರ ಅನುಕರಣೆಯ ಲುಕ್ ಎಲ್ಲೆಡೆ ವೈರಲ್ ಆಗುತ್ತಿದ್ದು, 1 ಮಿಲಿಯನ್​ಗೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಈ ಹಿಂದೆ, ಕ್ರಿಕೆಟಿಗ ಶಿಖರ್ ಧವನ್ ಅವರು ಕೂಡ ಅರ್ಜುನ್ ಅವರ 'ಪುಷ್ಪಾ' ಚಿತ್ರದ ಡೈಲಾಗ್ ಅನ್ನು ಅನುಕರಿಸಿರುವುದು ಒಂದು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಶಿಖರ್ ಧವನ್ ಅವರ ಆ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ. ಅದೇನೇ ಇರಲಿ, ಇದೀಗ ಕ್ರಿಕೆಟಿಗರನ್ನು 'ಪುಷ್ಪಾ' ಸಿನಿಮಾದ ಹುಚ್ಚು ಬಿಡಲಿಲ್ಲ ಎಂದೇ ಹೇಳಬೇಕು.