ಕರಾಚಿ: ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್ ಖಾನ್, ಅಂದಿನ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಕುತ್ತಿಗೆ ಚಾಕು ಹಿಡಿಯಲು ಭಾರತ ತಂಡದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಕಾರಣವಿರಬಹುದು ಮಾಜಿ ಆಟಗಾರ ರಶೀದ್ ಲತೀಫ್ ಹೇಳಿದ್ದಾರೆ. 2016-17ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ರನ್‌ಗಳಿಸಲು ಪರದಾಡುತ್ತಿದ್ದ ಯೂನಿಸ್ ಖಾನ್‌ಗೆ ಬ್ರಿಸ್ಬೇನ್‌ನಲ್ಲಿ ಟಿಪ್ಸ್ ಕೊಡಲು ಹೋದಾಗ ಕುತ್ತಿಗೆ ಚಾಕು ಹಿಡಿದಿದ್ದರು ಎಂದು ಗ್ರ್ಯಾಂಟ್ ಫ್ಲವರ್ ಇತ್ತೀಚೆಗೆ ಆರೋಪಿಸಿದ್ದರು. ಈ ಕುರಿತು ಪಿಸಿಬಿ ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದರೂ ರಶೀದ್ ಲತೀಫ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಕಾರಣವೊಂದನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ದಾದಾ ಚಿತ್ತ ಟಿ20 ಕ್ರಿಕೆಟ್ನತ್ತ..!
ಗ್ರ್ಯಾಂಟ್ ಫ್ಲವರ್ 2014ರಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ 5 ವರ್ಷಗಳ ಅವಧಿಗೆ ನೇಮಿಸಲಾಗಿತ್ತು. 2019ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕಳಪೆ ನಿರ್ವಹಣೆ ಹಿನ್ನೆಲೆಯಲ್ಲಿ ಇಡೀ ಸಹಾಯಕ ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು. ಬಳಿಕ ಗ್ರ್ಯಾಂಟ್ ಫ್ಲವರ್ ಶ್ರೀಲಂಕಾದ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕಗೊಂಡರು. ಕಾಕತಾಳೀಯ ಎಂಬಂತೆ ಗ್ರ್ಯಾಂಟ್ ಫ್ಲವರ್ ಬದಲಿಗೆ ಯೂನಿಸ್ ಖಾನ್ ಪಾಕ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾದರು.