More

    VIDEOS | ಧೋನಿ ಬಗ್ಗೆ ಬ್ರಾವೊ ಹಾಡು, ಅಭಿಮಾನಿಗಳಿಂದ ಹೆಲಿಕಾಪ್ಟರ್​ ಡ್ಯಾನ್ಸ್!

    ಬೆಂಗಳೂರು: ಭಾರತಕ್ಕೆ ಎಲ್ಲ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ನಾಯಕ ಮಹೇಂದ್ರ ಸಿಂಗ್​ ಧೋನಿ ಮಂಗಳವಾರ 39ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಇದನ್ನು ಸಂಭ್ರಮಿಸಲು ಅವರ ಅಭಿಮಾನಿಗಳೆಲ್ಲರೂ ಸಜ್ಜಾಗಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಧೋನಿ ನಾಯಕತ್ವದಡಿಯಲ್ಲಿ ಆಡುತ್ತಿರುವ ವೆಸ್ಟ್​ ಇಂಡೀಸ್​ ಆಲ್ರೌಂಡರ್​ ಡ್ವೇಯ್ನ್​ ಬ್ರಾವೊ ಕೂಡ ಅದರಲ್ಲೊಬ್ಬರು. ಗಾಯಕರೂ ಆಗಿರುವ ಬ್ರಾವೊ ಈಗಾಗಲೆ ಧೋನಿ ಬಗ್ಗೆ ಹಾಡೊಂದನ್ನು ಸಿದ್ಧಪಡಿಸಿದ್ದು, ಅದರ ಟೀಸರ್​ ಈಗಾಗಲೆ ಬಿಡುಗಡೆ ಮಾಡಿದ್ದಾರೆ. ಧೋನಿ ಜನ್ಮದಿನದಂದು ಪೂರ್ಣ ಹಾಡು ಬಿಡುಗಡೆ ಮಾಡುವ ಮುನ್ನ ಬ್ರಾವೊ, ಅಭಿಮಾನಿಗಳಿಗೆ ತಮ್ಮದೇ ಶೈಲಿಯಲ್ಲಿ ‘ಹೆಲಿಕಾಪ್ಟರ್​ ಡ್ಯಾನ್ಸ್​’ ಮಾಡುವ ಸವಾಲು ನೀಡಿದ್ದರು. ಅದಕ್ಕೀಗ ಧೋನಿ ಅಭಿಮಾನಿಗಳಿಂದ ಭಾರಿ ಸ್ಪಂದನೆ ದೊರೆತಿದೆ.

    ‘ಎಂಎಸ್ ಧೋನಿ ನಂಬರ್ 7’ ಎಂದು ಆರಂಭಗೊಳ್ಳುವ ಹಾಡು, ‘2007ರ ಟಿ20 ಚಾಂಪಿಯನ್, 2011ರ ವಿಶ್ವ ಚಾಂಪಿಯನ್, ದೇಶಕ್ಕಾಗಿ ಎಲ್ಲ ಟ್ರೋಫಿ ಗೆದ್ದ ಮೊದಲ ನಾಯಕ. ಎಲ್ಲರೂ ಬನ್ನಿ ಹೆಲಿಕಾಪ್ಟರ್ ಸೆಲಬ್ರೆಷನ್ ಮಾಡೋಣ…’ ಎಂದು ಹಾಡು ಮುಂದುವರಿಯುತ್ತದೆ. ನಿಮ್ಮದೇ ಶೈಲಿಯ ಹೆಲಿಕಾಪ್ಟರ್ ಡಾನ್ಸ್ ಮಾಡಿ ಅದರ ವಿಡಿಯೋ ಕಳುಹಿಸಿ ಎಂದು ಬ್ರಾವೊ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಇದಕ್ಕೆ ಅಭಿಮಾನಿಗಳಿಂದ ಬಂದಿರುವ ಹೆಲಿಕಾಪ್ಟರ್​ ಸ್ಟೆಪ್ಸ್​ನ ಡ್ಯಾನ್ಸ್​ ವಿಡಿಯೋಗಳನ್ನು ಬ್ರಾವೊ ಕಳೆದ ಕೆಲ ದಿನಗಳಿಂದ ಒಂದೊಂದಾಗಿ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸುತ್ತಿದ್ದಾರೆ. ಈ ಡ್ಯಾನ್ಸ್​ ಸ್ಟೆಪ್ಸ್​ ಈಗ ಭಾರಿ ಜನಪ್ರಿಯತೆಯನ್ನೂ ಪಡೆಯುತ್ತಿವೆ.

    ಇದನ್ನೂ ಓದಿ: VIDEO|ಧೋನಿ ಹಾಡಿನ ಟೀಸರ್ ಬಿಡುಗಡೆ ಮಾಡಿದ ಬ್ರಾವೊ

    ಭಾರತದ ಅಭಿಮಾನಿಗಳು ಮಾತ್ರವಲ್ಲದೆ, ವೆಸ್ಟ್​ ಇಂಡೀಸ್​ನಲ್ಲಿರುವ ಧೋನಿ ಅಭಿಮಾನಿಗಳು ಕೂಡ ಹೆಲಿಕಾಪ್ಟರ್​ ಡ್ಯಾನ್ಸ್​ ಮಾಡಿರುವ ವಿಡಿಯೋಗಳನ್ನು ಪ್ರಕಟಿಸಿದ್ದಾರೆ. ವಿಶಿಷ್ಠ ಶೈಲಿಯ ಬ್ಯಾಟಿಂಗ್​ಗೆ ಹೆಸರಾದ ಧೋನಿ ಅವರ ಹೆಲಿಕಾಪ್ಟರ್​ ಶಾಟ್​ ಕೂಡ ಸಾಕಷ್ಟು ಜನಪ್ರಿಯವಾಗಿದೆ. ಅದೇ ಶೈಲಿಯಲ್ಲಿ ಬ್ಯಾಟಿಂಗ್​ ಮಾಡುವ ಮೂಲಕ ಅಭಿಮಾನಿಗಳು ಡ್ಯಾನ್ಸ್​ ಸ್ಟೆಪ್ಸ್​ ಹಾಕಿರುವುದು ಗಮನ ಸೆಳೆದಿದೆ. ಪುಟ್ಟ ಮಕ್ಕಳು, ಯುವಕರು ಮತ್ತು ಮಹಿಳೆಯರು ಕೂಡ ಹೆಲಿಕಾಪ್ಟರ್​ ಡ್ಯಾನ್ಸ್​ ಮೂಲಕ ಮಿಂಚಿದ್ದಾರೆ.

    ಧೋನಿ, ಕೊಹ್ಲಿ 10ನೇ ತರಗತಿಯಲ್ಲಿ ಪಡೆದ ಅಂಕಗಳೆಷ್ಟು ಗೊತ್ತೇ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts