ಕ್ರೀಡೆ

RCB ಕ್ಯಾಪ್ಟನ್ ಆಗಿ​​ ರಜತ್​ ಪಾಟಿದಾರ್​ ಆಯ್ಕೆ; ಆಪ್ತನ ಬಗ್ಗೆ ವಿರಾಟ್​ ಕೊಹ್ಲಿ ಹೇಳಿದ್ದೇನು ಗೊತ್ತಾ?

RCB:ಇಂಡಿಯನ್​ ಪ್ರೀಮಿಯರ್ ಲೀಗ್​ 2025ರ 18 ಆವೃತ್ತಿನ ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB) ತಂಡದ ಹೊಸ ಕ್ಯಾಪ್ಟನ್ ಆಗಿ ರಜತ್ ಪಾಟೀದಾರ್ ಅವರನ್ನ ಇದೀಗ ನೇಮಕ ಮಾಡಲಾಗಿದೆ.

ಈ ಬಾರಿ ನಡೆದ ಮೆಗಾ ಆ್ಯಕ್ಷನ್​​ನಲ್ಲಿ ತಂಡದ ನಾಯಕನಾಗಿದ್ದ ಫಾಫ್​ ಡು ಪ್ಲೆಸ್ಸಿಸ್ ಅವರನ್ನು ಆರ್​​ಸಿಬಿ ಫ್ರಾಂಚೈಸಿ ಕೈ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಖಾಲಿ ಇದ್ದ ನಾಯಕ ಸ್ಥಾನಕ್ಕೆ ಇದೀಗ ರಜತ್ ಪಾಟೀದಾರ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ತಂಡದ ಸ್ಟಾರ್ ಆಟಗಾರ ವಿರಾಟ್​ ಕೊಹ್ಲಿ ತಮ್ಮ ಆಪ್ತಗಳೆಯ(ರಜತ್​ ಪಾಟಿದಾರ್) ಬಗ್ಗೆ ಒಂದಿಷ್ಟು ಮಾತುಗಳನ್ನಾಡಿದ್ದಾರೆ.

ಆಪ್ತನ ಬಗ್ಗೆ ಕೊಹ್ಲಿ ಹೇಳಿದ್ದೇನು..?

"ನಾನು ಮತ್ತು ಇತರ ತಂಡದ ಸದಸ್ಯರು ನಿಮ್ಮ ಹಿಂದೆಯೇ ಇರುತ್ತೇವೆ ರಜತ್. ಈ ಫ್ರಾಂಚೈಸ್‌ನಲ್ಲಿ ನೀವು ಬೆಳೆದ ರೀತಿ ಮತ್ತು ನೀವು ನಿರ್ವಹಿಸಿದ ರೀತಿ, ನೀವು ಎಲ್ಲಾ RCB ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ನಿಮ್ಮ ಆಟ ಮತ್ತು ನಿಮ್ಮ ಕಾರ್ಯ ನಾಯಕತ್ವಕ್ಕೆ ತುಂಬಾ ಅರ್ಹವಾಗಿದೆ. ” ಎಂದು ವಿರಾಟ್​ ಆಪ್ತನ ಬಗ್ಗೆ ಹೊಗಳಿದ್ದಾರೆ.

ಇನ್ನು ವಿರಾಟ್​ ಕೊಹ್ಲಿ ಈ ಹಿಂದೆ 143 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. ಆದರೆ ಒಮ್ಮೆಯೂ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡದ ನಿರಾಸೆಯಲ್ಲಿ ಅವರು ನಾಯಕತ್ವ ತ್ಯಜಿಸಿದ್ದರು. ಅಲ್ಲದೆ 2021ರಲ್ಲಿ ಕೊಹ್ಲಿ ಬ್ಯಾಟಿಂಗ್​ನತ್ತ ಹೆಚ್ಚಿನ ಗಮನಹರಿಸುವ ಸಲುವಾಗಿಯೂ ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಸದ್ಯ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವುದರಿಂದ ಹೆಚ್ಚಿನ ಒತ್ತಡವಿಲ್ಲದೆ ಆರ್​ಸಿಬಿ ನಾಯಕತ್ವವನ್ನು ಮರಳಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಆದರೆ, ಆರ್​ಸಿಬಿ ಫ್ರಾಂಚೈಸಿ ಯುವ ಆಟಗಾರನಿಗೆ ಮಣೆಹಾಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಲಿಯಾಮ್ ಲಿವಿಂಗ್​ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್​ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕೊಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್​ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್​ಗಿಡಿ(ಏಜೆನ್ಸೀಸ್​)