ಕ್ರೀಡೆ

ಕ್ರಿಕೆಟರ್ ಭುವನೇಶ್ವರ್​ ಜತೆಗಿನ ಸಂಬಂಧ ಎಂಥದ್ದು? ಆ್ಯಂಕರ್​ ಶ್ಯಾಮಲಾ ಹೇಳಿದ್ದು ಹೀಗೆ...​

ಹೈದರಾಬಾದ್​: ಟಾಲಿವುಡ್​ ಪ್ರಖ್ಯಾತ ಆ್ಯಂಕರ್​ ಶ್ಯಾಮಲಾ ಇತ್ತೀಚೆಗೆ ತನ್ನ ಪತಿಯಿಂದಾಗಿ ಭಾರಿ ಸುದ್ದಿಯಲ್ಲಿದ್ದರು. ಶ್ಯಾಮಲಾ ಪತಿ ನರಸಿಂಹರೆಡ್ಡಿ ವಂಚನೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದರು.

ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆಂದು ಆರೋಪಿ ಮಹಿಳೆಯೊಬ್ಬರು ನರಸಿಂಹರೆಡ್ಡಿ ವಿರುದ್ಧ ರಾಯದುರ್ಗ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಬಂಧನಕ್ಕೆ ಒಳಗಾಗಿದ್ದ ನರಸಿಂಹರೆಡ್ಡಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಶ್ಯಾಮನಾ ನನ್ನ ಪತಿ ಅಂತಹ ವ್ಯಕ್ತಿಯಲ್ಲ ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದಿದ್ದರು.

ಇದೀಗ ಶ್ಯಾಮಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಪತಿಯ ಬದಲಾಗಿ ಟೀಮ್​ ಇಂಡಿಯಾ ಆಟಗಾರ ಭುವನೇಶ್ವರ್​ ಕುಮಾರ್​ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಶ್ಯಾಮಲಾ ಮತ್ತು ಭುವನೇಶ್ವರ್​ ಕುಮಾರ್​ ನೋಡಲು ಸಹೋದರ-ಸಹೋದರಿಯಂತೆ ಕಾಣುತ್ತಾರೆ. ಇಬ್ಬರ ನೋಟದಲ್ಲೂ ಸಾಮ್ಯತೆ ಇದೆ. ಹೀಗಾಗಿ ಇಬ್ಬರ ಮೀಮ್ಸ್​ ಅನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಇದು ಶ್ಯಾಮಲಾ ಗಮನಕ್ಕೂ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆ್ಯಂಕರ್​, ಹೀಗ್ಯಾಕೆ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ನನಗೂ ಭುವನೇಶ್ವರ್​ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲಿಗೆ ಭುವಿಗೂ ಶ್ಯಾಮಲಾಗೂ ಯಾವುದೇ ಸಂಬಂಧವಿಲ್ಲ ಎಂಬುದ ಖಚಿತವಾಗಿದೆ. (ಏಜೆನ್ಸೀಸ್​)