ಕ್ರೀಡೆ

ಪ್ರೊ ಕಬಡ್ಡಿ ಲೀಗ್​ ಸೀಸನ್​ 9: ದೆಹಲಿಗೆ ಹ್ಯಾಟ್ರಿಕ್ ಗೆಲುವು

ಬೆಂಗಳೂರು: ರೋಚಕ ಕದನಕ್ಕೆ ಸಾಕ್ಷಿಯಾದ ನಿನ್ನೆ (ಅ.12) ನಡೆದ ದಿನದ 2ನೇ ಪಂದ್ಯದಲ್ಲಿ ಯುಪಿ ಯೋಧಾ ತಂಡ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಎದುರು 44-42 ಅಂತರದಿಂದ ಸೋಲು ಅನುಭವಿಸಿತು.

ಹ್ಯಾಟ್ರಿಕ್ ಗೆಲುವಿನ ಸಾಧನೆಯೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ರೈಡರ್ ಸುರೀಂದರ ಗಿಲ್ (18) ದಿಟ್ಟ ಆಟದ ನಡುವೆ ಯೂ ಮೊದಲಾರ್ಧದಲ್ಲಿ 25-19ರಿಂದ ಹಿನ್ನಡೆ ಸಾಧಿಸಿದ ಡೆಲ್ಲಿ, ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನದಿಂದ ಯುಪಿಗೆ ತಿರುಗೇಟು ನೀಡಿತು.

ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ನಾಯಕ ಮಣಿಂದರ್ ಸಿಂಗ್ (11 ಅಂಕ) ಮತ್ತು ಡಿಫೆಂಡರ್ ಗಿರೀಶ್ (5) ತೋರಿದ ಸಂಘಟಿತ ಪ್ರದರ್ಶನದ ಎದುರು ಆರಂಭಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲವಾದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಗೆಲುವಿನಿಂದ ವಂಚಿತವಾಯಿತು. ರೈಡರ್​ಗಳಾದ ವಿಕಾಸ್ ಖಂಡೋಲ (7) ಮತ್ತು ಭರತ್ (8) ದಿಟ್ಟ ನಿರ್ವಹಣೆಯ ನಡುವೆಯೂ ಬೆಂಗಳೂರು ಬುಲ್ಸ್ ತಂಡ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಎದುರು 33-42 ಅಂತರದಿಂದ ಸೋಲು ಅನುಭವಿಸಿತು.