ಕ್ರೀಡೆ

ಇಂಡೋ-ಪಾಕ್​ ಕ್ರಿಕೆಟ್​ ಕದನಕ್ಕೆ ಕ್ಷಣಗಣನೆ: ಪತಿ-ಪತ್ನಿ ಫೋಟೋ ಶೇರ್​ ಮಾಡಿ ಜಾಫರ್​ ಕೊಟ್ರು ಒಳ್ಳೆಯ ಸಲಹೆ

ನವದೆಹಲಿ: ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದ ಆ ಕುತೂಹಲಕಾರಿ ದಿನ ಬಂದೇ ಬಿಟ್ಟಿದೆ. ಹೌದು, ಟಿ20 ವಿಶ್ವಕಪ್​ ಟೂರ್ನಿ ಆರಂಭವಾಗಿದ್ದರೂ ಇಡೀ ವಿಶ್ವ ಕ್ರಿಕೆಟ್​ನ ಕಣ್ಣು ಇಂದು ರಾತ್ರಿ (ಅ.24) ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ vs ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ನೆಟ್ಟಿದೆ. ಇದೇ ಸಂದರ್ಭದಲ್ಲಿ ಟೀಮ್​ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್​ ತಂಡಕ್ಕೆ ಒಂದು ಸಲಹೆಯನ್ನು ನೀಡಿದ್ದಾರೆ.

ಇಂಡೋ-ಪಾಕ್​ ಕ್ರಿಕೆಟ್​ ಕದನ ಅಂದ್ರೆ ಅದೊಂದು ನಿಜವಾದ ಯುದ್ಧದಂತೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದು ಯಾರೇ ಗೆದ್ದರೂ? ಅಥವಾ ಯಾರೇ ಸೋತರು? ಪರಿಣಾಮ ಮಾತ್ರ ತೀವ್ರವಾಗಿರುತ್ತದೆ. ಗೆದ್ದರೆ ವಿಶ್ವಕಪ್​ ಟ್ರೋಫಿ ಗೆದ್ದಷ್ಟೇ ಸಂಭ್ರಮಿಸುತ್ತಾರೆ. ಒಂದು ವೇಳೆ ಸೋತರೆ ಆಯಾ ದೇಶದ ಜನತೆಯ ಕೆಂಗಣ್ಣಿಗೆ ತಂಡಗಳು ಗುರಿಯಾಗುತ್ತವೆ. ಹೀಗಾಗಿ ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂಬ ಹಠದೊಂದಿಗೆ ಎರಡು ತಂಡಗಳು ಕಾದಾಡುತ್ತವೆ. ಸೋತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬ ಆಟಗಾರನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ರೀಡಾಭಿಮಾನಿಗಳು ತಮ್ಮ ದೇಶ ಗೆಲ್ಲಲ್ಲಿ ಎಂದು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.

ಇದರ ನಡುವೆ ಟೀಮ್​ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್​ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ. ತಮ್ಮ ಟ್ವಿಟರ್​ನಲ್ಲಿ ಫೋಟೋವೊಂದನ್ನು ಜಾಫರ್​ ಶೇರ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಪತಿ-ಪತ್ನಿ ಒಂದೇ ಬೆಡ್​ ಮೇಲೆ ಮಲಗಿದ್ದಾರೆ. ಪತಿ ಯಾವುದೋ ಗಾಢ ಚಿಂತೆಯಲ್ಲಿ ಮುಳುಗಿರುವಂತೆ ಹಾಗೂ ಪತ್ನಿ ಗಂಡನನ್ನು ನೋಡುತ್ತಿರುವುದು ಫೋಟೋದಲ್ಲಿದೆ.

ಫೋಟೋ ಮೇಲೆ ಪತಿ-ಪತ್ನಿ ಈ ರೀತಿ ಯೋಚಿಸುತ್ತಿದ್ದಾರೆಂದು ಬರೆಯಲಾಗಿದೆ. ಬೆಟ್​ ಕಟ್ಟುತ್ತೇನೆ ಖಂಡಿತ ನನ್ನ ಪತಿ ಬೇರೆ ಹೆಣ್ಣಿನ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಪತ್ನಿ ಹೇಳುತ್ತಿರುವಂತೆ ಬರೆಯಲಾಗಿದೆ. ಇದಕ್ಕೆ ಉತ್ತರವಾಗಿ ನಾಳಿನ (ಅ.24) ಪಂದ್ಯದಲ್ಲಿ ನಾವು ಮೊದಲು ಬೌಲಿಂಗ್​ ಮಾಡಬೇಕು. ಇತ್ತೀಚಿನ ಪಂದ್ಯಗಳನ್ನು ನೋಡಿದರೆ ದುಬೈ ಚೇಸಿಂಗ್​ ಮಾಡುವವರಿಗೆ ಅನುಕೂಲವಾಗಿದೆ. ಆದರೆ, ಪಾಕಿಸ್ತಾನ ಅತ್ಯುತ್ತಮ ಚೇಸಿಂಗ್​ ಟೀಮ್​ ಕೂಡ ಅಲ್ಲ. ಹೀಗಾಗಿ ನಾವು ಮೊದಲು ಬ್ಯಾಟ್​ ಮಾಡಬಹುದು ಎಂದು ಯೋಚಿಸುತ್ತಿರುವಂತೆ ಫೋಟೋ ಮೇಲೆ ಬರೆಯಲಾಗಿದೆ.

ವಾಸಿಂ ಜಾಫರ್​ ನಿನ್ನೆ ಶೇರ್​ ಮಾಡಿರುವ ಫೋಟೋ ವೈರಲ್​ ಆಗಿದ್ದು, ಇಂದಿನ ಪಂದ್ಯದಲ್ಲಿ ಇಂಡಿಯಾ ಬ್ಯಾಟಿಂಗ್​ ಅಥವಾ ಬೌಲಿಂಗ್​ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡಿರೂ ಗೆಲುವು ಭಾರತಕ್ಕೆ ಎಂದಿದ್ದಾರೆ. ಏಕೆಂದರೆ ಪಾಕ್​ ಚೇಸಿಂಗ್​ನಲ್ಲಿ ತುಂಬಾ ವೀಕ್​ ಆಗಿದೆ ಎಂಬುದು ಜಾಫರ್​ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)