ಚೆನ್ನೈ: ಆರಂಭಿಕ ಪ್ರಭ್ಸಿಮ್ರಾನ್ ಸಿಂಗ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ಲಿಯಾಮ್ ಲಿವಿಂಗ್ಸ್ಟನ್ ಉಪಯುಕ್ತ ಆಟದ ಫಲವಾಗಿ ಪಂಜಾಬ್ ಕಿಂಗ್ಸ್ 4 ವಿಕೆಟ್ಗಳ ಜಯ ಸಾಧಿಸಿದೆ.
ಚೆನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು ಆರಂಭಿಕರಾದ ಡೆವೊನ್ ಕಾನ್ವೇ(92 ರನ್, 52 ಎಸೆತ, 16 ಬೌಂಡರಿ, 1 ಸಿಕ್ಸರ್), ಋತುರಾಜ್ ಗಾಯಕ್ವಾಡ್(37 ರನ್, 31 ಎಸೆತ, 4 ಬೌಂಡರಿ, 1 ಸಿಕ್ಸರ್) ಸ್ಪೋಟಕ ಆರಂಭಿಕ ಜೊತೆಯಾಟದ ಫಲವಾಗಿ 4 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 200 ರನ್ ಗಳಿಸಿತ್ತು.
ಪಂಜಾಬ್ ಪರ ಅರ್ಷ್ದೀಪ್ ಸಿಂಗ್(4-0-37-1), ಸ್ಯಾಮ್ ಕರ್ರನ್(4-0-46-1), ರಾಹುಲ್ ಚಹರ್(4-0-35-1), ಸಿಕಂದರ್ ರಾಜಾ(3-0-31-1), ಕಗಿಸೋ ರಬಾಡ(4-0-34-0), ಲಿಯಾಮ್ ಲಿವಿಂಗ್ಸ್ಟನ್(1-0-16-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಗುರಿ ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ ತಂಡವು ಆರಂಭಿಕ ಪ್ರಭ್ಸಿಮ್ರಾನ್ ಸಿಂಗ್(40 ರನ್, 24 ಎಸೆತ, 4 ಬೌಂಡರಿ, 2 ಸಿಕ್ಸರ್), ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ಲಿಯಾಮ್ ಲಿವಿಂಗ್ಸ್ಟನ್(40 ರನ್, 24 ಎಸೆತ, 1 ಬೌಂಡರಿ, 4 ಸಿಕ್ಸರ್), ಜಿತೇಶ್ ಶರ್ಮಾ(21ರನ್, 10 ಎಸೆತ, 2 ಬೌಂಡರಿ, 1 ಸಿಕ್ಸರ್) ದಿಟ್ಟ ಚೇಸಿಂಗ್ ಫಲವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.
ಚೆನ್ನೈ ಪರ ತುಷಾರ್ ದೇಶಪಾಂಡೆ(4-0-49-3), ರವೀಂದ್ರ ಜಡೇಜಾ(4-0-32-2), ಮತೀಷ ಪತಿರಾಣಾ(4-0-32-1), ಮಹೀಶ್ ತೀಕ್ಷ್ಣ(4-0-36-0), ಆಕಾಶ್ ಸಿಂಗ್(3-0-35-0), ಮೊಯಿನ್ ಅಲಿ(1-0-10-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.