ನವದೆಹಲಿ: ಪ್ರಸ್ತುತ ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ ಪಂದ್ಯಗಳ ಪೈಕಿ ಎರಡು ತಂಡಗಳು ತಲಾ ಒಂದೊಂದು ಮ್ಯಾಚ್ ಗೆದ್ದಿವೆ. ಇದೀಗ ಮೂರನೇ ಟೆಸ್ಟ್ ಮ್ಯಾಚ್ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ಟೀಮ್ ಇಂಡಿಯಾ, ಕಾಂಗರೂ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಕೊಂಚ ತತ್ತರಿಸಿದೆ (Siraj Mistake).
ಇದನ್ನೂ ಓದಿ: Garlic Benefits: ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನಿ! ಅನಾರೋಗ್ಯಕ್ಕೆ ಗುಡ್ ಬೈ ಹೇಳಿ..
ಮೂರನೇ ಟೆಸ್ಟ್ನ ಎರಡನೇ ದಿನದ ಅಂತ್ಯಕ್ಕೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪಡೆ 101 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಇನ್ನು ಕಾಂಗರೂ ಪಡೆಯ ಬ್ಯಾಟರ್ಗಳ ವಿರುದ್ಧ ಬೌಲಿಂಗ್ ದಾಳಿ ನಡೆಸಿದ ರೋಹಿತ್ ಶರ್ಮಾ ಪಡೆ, ಆರಂಭಿಕ ಹಂತದಲ್ಲಿ ಉಸ್ಮಾನ್ ಖವಾಜಾ ಮತ್ತು ನಾಥನ್ ಮೆಕ್‌ಸ್ವೀನಿ ಅಬ್ಬರವನ್ನು ಕಟ್ಟಿಹಾಕುವಲ್ಲಿ ಜಸ್ಪ್ರೀತ್ ಬುಮ್ರಾ ಮೇಲುಗೈ ಸಾಧಿಸಿದರೆ, ಮೊಹಮ್ಮದ್ ಸಿರಾಜ್ ಕೇವಲ ಒಂದು ವಿಕೆಟ್ ಕಬಳಿಸಿದರು. ಇವರಿಬ್ಬರ ಬೌಲಿಂಗ್ ಮಧ್ಯೆ ಕ್ಯಾಪ್ಟನ್ ರೋಹಿತ್, ಆಕಾಶ್ ದೀಪ್ರನ್ನು ಅಖಾಡಕ್ಕೆ ತಂದಿದ್ದೇ ತಡ ಆಸೀಸ್ ಬ್ಯಾಟರ್ಗಳಲ್ಲಿ ಪರದಾಟ ಶುರುವಾಯಿತು. ಇದನ್ನು ಗಮನಿಸಿದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಚೇತೇಶ್ವರ ಪೂಜಾರ, ಆಕಾಶ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇವರಿಬ್ಬರೂ ಆಕಾಶ್ ದೀಪ್ ಅವರನ್ನು ನೋಡಿ ಕಲಿಯಬೇಕು. ಅವರು ಐದು ಮೀಟರ್ ಉದ್ದದ ಬೌಲಿಂಗ್ ದಾಳಿ ನಡೆಸಿದ್ದಾರೆ. ಇದರಿಂದ ಆಸೀಸ್ ಬ್ಯಾಟರ್‌ಗಳು ಪರದಾಡುವಂತಾಯಿತು. ಮತ್ತೊಂದೆಡೆ, ಬುಮ್ರಾ ಮತ್ತು ಸಿರಾಜ್ ಆ ರೀತಿ ಮಾಡಲು ಸಾಧ್ಯವಾಗಲಿಲ್ಲ. ಇಲ್ಲಿನ ಪಿಚ್ಗೆ 6 ಮೀಟರ್ ಉದ್ದದ ಬೌಲಿಂಗ್ ಸರಿ ಹೊಂದುವುದಿಲ್ಲ. ಟೀಮ್ ಇಂಡಿಯಾ 13 ಓವರ್‌ಗಳನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಳ್ಳಬಹುದು. ಮೊದಲ ಐದು ಅಥವಾ ಆರು ಓವರ್‌ಗಳಲ್ಲಿ, ಬೌಲರ್ ಬ್ಯಾಟರ್ಗಳನ್ನು ಕಾಡಲಿಲ್ಲ. ಆದರೆ ಎರಡನೇ ಬಾರಿ ಬೌಲಿಂಗ್ ವಿಭಾಗದಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ" ಎಂದು ಚೇತೇಶ್ವರ ಪೂಜಾರ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).